ನನ್ನ ಹೀರೋ ನನ್ನ ಅಪ್ಪ

ಅಪ್ಪ ನನ್ನ ಜೀವನದ ಮೊದಲ ಹೀರೋ, ನನ್ನ ನಂಬಿಕೆ, ನನ್ನ ಪ್ರೀತಿ, ನನ್ನ ಗುರು, ನನ್ನ ಕನಸು, ನನ್ನ ಬದುಕಿನ ಪ್ರೀತಿ ನನ್ನ ಅಪ್ಪ, ನನಗೆ ಬದುಕಿನ ಏರಿಳಿತಗಳ ಬಗ್ಗೆ, ನನ್ನ ಜೀವನದ ಕನಸಿನ ಬಗ್ಗೆ, ನನ್ನ ಗುರಿಯ ಬಗ್ಗೆ ತಿಳಿಸಿದ ಮೊದಲ ಗುರು ನನ್ನ ಅಪ್ಪ. ನನ್ನ ಅಪ್ಪ ನನಗೆ ಗುರು ಹಿರಿಯರ ಜೊತೆ ಗೌರವದಿಂದ ನಡೆದುಕೊಳ್ಳುವ ರೀತಿ ಸ್ನೇಹಿತರ ಜೊತೆ ಒಡನಾಡುವ ರೀತಿ ತಿಳಿಸಿದ ಮೊದಲ ಗುರು.

ಅಸಹಾಯಕ ವ್ಯಕ್ತಿಗಳ ಜೊತೆ ಸ್ನೇಹದಿಂದ ವರ್ತಿಸುವ ರೀತಿ ಕಲಿಸಿದ ಮೊದಲ ಗುರು ನನ್ನ ಅಪ್ಪ, ನನ್ನ ಅಪ್ಪ ನನ್ನನ್ನು ಬೆಳೆಸಿದ ರೀತಿ ಅದ್ಭುತ, ನನ್ನ ಆಸೆಗಳು ನನ್ನ ಕಣ್ಣಿನಲ್ಲಿ ಬರುವ ಮುನ್ನ ನನ್ನ ಕೈಗಿಟ್ಟ ನನ್ನ ಹೀರೋ ನನ್ನ ಅಪ್ಪ. ಪ್ರಪಂಚದ ಎಲ್ಲ ಸುಖವನ್ನು ನನ್ನ ಬೊಗಸೆಯಲ್ಲಿಡಲು ಶ್ರಮಿಸುತ್ತಿರುವ ಶ್ರಮಜೀವಿ ನನ್ನ ಅಪ್ಪ, ನನ್ನ ಅಪ್ಪ ಒಬ್ಬ ರೈತ. ದೇಶಕ್ಕೆ ಅನ್ನ ನೀಡುವ ರೈತನ ಮಗ ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಇದೆ. ನನ್ನ ಅಪ್ಪ ಒಬ್ಬ ರೈತನಾಗಿ ನನ್ನನ್ನು ಬೆಳೆಸಿದ ರೀತಿ ಯಾರಿಗೂ ಸರಿಸಾಟಿ ಇಲ್ಲ. ತಾನು ನೋಡದ ಪ್ರಪಂಚವನ್ನು ನಾನು ನೋಡಲಿ ಎಂದು ಬಯಸುವ ನಿಸ್ವಾರ್ಥ ಜೀವಿ ನನ್ನ ಅಪ್ಪ. ತನ್ನ ಪಾಲಿಗಿಲ್ಲದ ವಿದ್ಯೆ ನನ್ನ ಮಗನಿಗಿರಲಿ ಎಂದು ಖಾಸಗಿ ಶಾಲೆಯಲ್ಲಿ ಅತ್ಯುನ್ನತ ವಿದ್ಯಾಭ್ಯಾಸ ಕೊಡಿಸುತ್ತಿರುವ ಉನ್ನತ ಜೀವಿ ನನ್ನ ಅಪ್ಪ. ಪ್ರಪಂಚದ ಎಲ್ಲಾ ಸುಖ, ತಾನು ಪಡದ ಸುಖ ನನ್ನ ಮಗನ ಪಾಲಿಗಿರಲಿ ಎಂದು ಸದಾ ಬೇಡುವ ವ್ಯಕ್ತಿ ನನ್ನ ಅಪ್ಪ. ನನ್ನ ಅಪ್ಪನಿಂದ ಎಷ್ಟು ಕಲಿತರು ಮುಗಿಯದ ಜೀವನದ ಅನುಭವ ಪಾಠಗಳು ಅದೆಷ್ಟೋ, ತಾನು ಪುಟ್ಟ ಮನೆಯಲ್ಲಿದ್ದಾಗ ಯೋಚಿಸಿದ ನನ್ನ ಅಪ್ಪ ನಾನು ಭೂಮಿಯ ಮೇಲೆ ಬಂದಾಗ ದೊಡ್ಡ ಮನೆಯಲ್ಲಿ ನನ್ನ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ ವ್ಯಕ್ತಿ ನನ್ನ ಅಪ್ಪ. ತನಗಿಲ್ಲದ ಊಟ ಬಟ್ಟೆ ಎಲ್ಲವೂ ನನ್ನ ಪಾಲಿಗೆ ಅತ್ಯುನ್ನತವಾಗಿರಬೇಕೆಂದು ಬಯಸುವ ವ್ಯಕ್ತಿ ನನ್ನ ಅಪ್ಪ.

ನನಗಾಗಿ ತನ್ನ ಬದುಕನ್ನು ಮುಡುಪಾಗಿಟ್ಟಿರುವ ದೈವ ನನ್ನ ಅಪ್ಪ. ದೇವರಲ್ಲಿ ಭೇದವಿದ್ದರೂ ನನ್ನ ಅಪ್ಪನಲ್ಲಿ ಭೇದ ಕಾಣಲಿಲ್ಲ. ಪ್ರಪಂಚದ ಶ್ರೇಷ್ಠ ವ್ಯಕ್ತಿ ಅದ್ಭುತ ವ್ಯಕ್ತಿತ್ವವಿರುವ , ನಿಸ್ವಾರ್ಥವಿರುವ ಅಪ್ರತಿಮ ವ್ಯಕ್ತಿ ನನ್ನ ಅಪ್ಪ, ನನ್ನ ಬದುಕಿನ ತುಂಬಾ ಬಣ್ಣಗಳನ್ನು ತುಂಬಿ ನಾನು ಇಷ್ಟು ಖುಷಿಯಾಗಿರಲು, ನನ್ನ ಬದುಕನ್ನು ಸುಂದರವಾಗಿಸಲು ಶ್ರಮಿಸುತ್ತಿರುವ ವ್ಯಕ್ತಿ ನನ್ನ ಅಪ್ಪ, ನನ್ನ ಜೀವನದ ಮೊದಲ “ಗುರು” ಮೊದಲ ‘ಮಾತು’ ಮೊದಲ ‘ಪ್ರೀತಿ’ ಎಲ್ಲ ಮೊದಲುಗಳ ರೂವಾರಿ ನನ್ನ ಅಪ್ಪ .
