ಕ್ಯಾಲೆಂಡರ್ ಹಿಂದಿನ ಗುಟ್ಟು – ಹೊಸ ವರ್ಷದ ಆಚರಣೆ ಹೇಗೆ ಆರಂಭವಾಯಿತು ?

4.8
(57)

ಕ್ಯಾಲೆಂಡರ್ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ರತಿಯೊಬ್ಬರು ಈ ಕ್ಯಾಲೆಂಡರ್ ನ ಮೇಲೆ ಅವಲಂಬಿತರೆ. ಅದು ಯಾವುದೇ ಕಾರ್ಯಕ್ರಮದ ನಿಗದಿ ಇರಬಹುದು, ಪರೀಕ್ಷೆಯ ವಿಷಯವಿರಬಹುದು, ಪ್ರಯಾಣ ವಿರಬಹುದು, ಹುಟ್ಟು-ಸಾವುಗಳ ದಿನಾಂಕದ ಗುರುತಿರಬಹುದು, ಶುಭ ಕಾರ್ಯಗಳ ನಿಗದಿ, ರೈತರು ಬೆಳೆ ಬೆಳೆಯಲು, ಮಳೆ-ಗಾಳಿ, ಬೇಸಿಗೆ -ಚಳಿ ಹೀಗೆ ಯಾವುದೇ ವಿಷಯ ತೆಗೆದುಕೊಂಡರು ಅಲ್ಲಿ ಎಲ್ಲಾ ವಿಷಯಗಳ ಜೊತೆಗೆ ಪ್ರಮುಖವಾಗಿ ಬರುವುದು ಒಂದು ದಿನಾಂಕ, ತಿಂಗಳು, ವಾರ, ವರ್ಷ ಒಟ್ಟಾರೆ ಅಲ್ಲಿ ಒಂದು ಕ್ಯಾಲೆಂಡರ್.

ಇವತ್ತು ನಾವು ಉಪಯೋಗಿಸುತ್ತಿರುವ ಕ್ಯಾಲೆಂಡರ್ ಯಾವುದು ಎಂದರೆ ಹಲವರು ಹೇಳುವುದು ಬೆಂಗಳೂರು ಮುದ್ರಣಾಲಯ, ಮಲ್ಲಿಗೆ, ಕಾಲಚಕ್ರ, ಪೂರ್ಣ ಚೇತನ ಕ್ಯಾಲೆಂಡರ್ ಅಥವಾ ಅವರ ಕಚೇರಿದೋ , ಸ್ನೇಹಿತರದೋ, ಯಾವುದೋ ಸಂಘ ಸಂಸ್ಥೆಗಳು ನೀಡಿದ ಕ್ಯಾಲೆಂಡರ್ ಎಂದು ಹೇಳುತ್ತಾರೆ.

ನಾವು ಉಪಯೋಗಿಸುತ್ತಿರುವ ಪಾಶ್ಚಿಮಾತ್ಯಿಕ ಕ್ಯಾಲೆಂಡರ್ ಅಥವಾ ವ್ಯವಹಾರದ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ (Gregorian Calendar) ಎಂದು ಕರೆಯುತ್ತಾರೆ. ನಾವು ಅಂದರೆ ಭಾರತೀಯರು ಬಳಸುವ ಕ್ಯಾಲೆಂಡರನ್ನು ಹಿಂದೂ ರಿತ್ಯಾ ಅದನ್ನು ಪಂಚಾಂಗವೆಂದು ಕರೆಯುತ್ತಾರೆ.

ಈ ಗ್ರೆಗೋರಿಯನ್ ಕ್ಯಾಲೆಂಡರ್ ಎಂಬುದು ಬರುವುದಕ್ಕೂ ಮೊದಲು ಪಾಶ್ಚಿಮಾತ್ಯಿಕ ದೇಶಗಳಲ್ಲಿ ಬೇರೆ ಬೇರೆ ಕ್ಯಾಲೆಂಡರ್ ಗಳನ್ನು ಬಳಸುತ್ತಿದ್ದರು. ಅವುಗಳಲ್ಲಿ ಸೀಸರ್ ಕ್ಯಾಲೆಂಡರ್ (Caesar’s calendar), ಜೂಲಿಯನ್ ಕ್ಯಾಲೆಂಡರ್ (Julian calendar) , ರೋಮನ್ ಕ್ಯಾಲೆಂಡರ್ (Roman calendar) ಕ್ರಿಸ್ತಪೂರ್ವ 753 ರಲ್ಲಿ ಪ್ರಮುಖವಾದುದು.

ರೋಮನ್ ಕ್ಯಾಲೆಂಡರ್ ನಲ್ಲಿ 10 ತಿಂಗಳಗಳು ಮಾತ್ರ ಇದ್ದು Martius ಅಂದರೆ ಮಾರ್ಚ್ ನಿಂದ ಡಿಸೆಂಬರ್ ತನಕ ಮಾತ್ರ ನಮೂದಿಸಲಾಗುತ್ತಿತ್ತು. ನಂತರ ನಡೆದ ಅಧ್ಯಯನಗಳ ಆಧಾರದ ಮೇಲೆ Numa Pompilius ಎಂಬ ರೋಮ್ ನ ಎರಡನೆ ರಾಜ ಜನವರಿ ಮತ್ತು ಫೆಬ್ರವರಿ ಎಂಬ ಎರಡು ತಿಂಗಳುಗಳನ್ನು ಮೊದಲು ಸೇರಿಸಿದ ಎಂಬುದು ರೋಮ್ ನ ಇತಿಹಾಸದಲ್ಲಿ ಒಂದು ಉಲ್ಲೇಖವಿದೆ.

ಇದರಲ್ಲಿ ಜೂಲಿಯನ್ ಕ್ಯಾಲೆಂಡರ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು 1854 ರಲ್ಲಿ ಜಾರಿಗೆ ತರಲಾಯಿತು. ಆ ಬದಲಾವಣೆ ಲೀಪ್ ಇಯರ್, ಜೂಲಿಯನ್ ಕ್ಯಾಲೆಂಡರ್ ನಲ್ಲಿ ಬಿಡಲಾಗಿದ್ದ 10 ದಿನಗಳನ್ನು ಸೇರಿಸಲಾಯಿತು ಹೀಗೆ ಕೆಲವು ಬದಲಾವಣೆಗಳನ್ನು ಮಾಡಿದರು. ಗ್ರೆಗೋರಿಯನ್ ಅಂದಿನ ಕ್ರೈಸ್ತ ಗುರುವಾದ್ದರಿಂದ ಅವರ ಹೆಸರಿನಲ್ಲಿ ಕ್ಯಾಲೆಂಡರ್ ತರಲಾಯಿತು.

ಗ್ರೆಗೋರಿಯನ್ ಕ್ಯಾಲೆಂಡರ್ ಸೂರ್ಯನ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಸೂರ್ಯನ ಉದಯ ಹಾಗೂ ಅಸ್ತದ ಮೇಲೆ ದಿನಗಳನ್ನು ನಿಗದಿಪಡಿಸಲಾಗಿದೆ. ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಚಲಿಸುವ 360° ಗಳನ್ನು ಬದಲಾಗುವ ಅಕ್ಷಾಂಶವನ್ನು 30° ಗಳಿಗೆ ಒಂದು ತಿಂಗಳೆಂದು ಪರಿಗಣಿಸಿ, 12 ಭಾಗಗಳನ್ನಾಗಿ ಮಾಡಿ ಒಂದು ಭಾಗವನ್ನು ತಿಂಗಳೆಂದು 12 ಭಾಗವನ್ನು ಒಟ್ಟಿಗೆ ಒಂದು ವರ್ಷವೆಂದು ಹೇಳಲಾಗಿದೆ. ಈ 12 ತಿಂಗಳುಗಳಿಗೂ ಒಂದೊಂದು ಹೆಸರು ಇಡುವುದು ಎಲ್ಲಾ ಕ್ಯಾಲೆಂಡರ್ಗಳ ವಾಡಿಕೆ. ತಿಂಗಳಿನ ಹೆಸರನ್ನು ಈ ರೀತಿ ನಿಗದಿಪಡಿಸಲಾಗಿದೆ.

punithone
Month Latin Origin
January Januarius Named after the god Janus.
February Februarius Named after Februa, the purification festival.
March Martius Named after the god Mars
April Aprilis Named either after the goddess Aphrodite or the Latin word aperire, to open
May Maius Probably named after the goddess Maia
June Junius Probably named after the goddess Juno.
July Julius Named after Julius Caesar in 44 B.C.E. Prior to that time its name was Quintilis from the word quintus, fifth, because it was the 5th month in the old Roman calendar.
August Augustus Named after emperor Augustus in 8 B.C.E. Prior to that time the name was Sextilis from the word sextus, sixth, because it was the 6th month in the old Roman calendar.
September September From the word septem, seven, because it was the 7th month in the old Roman calendar.
October October From the word octo, eight, because it was the 8th month in the old Roman calendar.
November November From the word novem, nine, because it was the 9th month in the old Roman calendar.
December December From the word decem, ten, because it was the 10th month in the old Roman calendar.

ಇದಿಷ್ಟು ಪಾಶ್ಚಿಮಾತ್ಯ ಕ್ಯಾಲೆಂಡರ್ ನ ಬಗ್ಗೆಯಾದರೆ ಈ ಎಲ್ಲಾ ಕ್ಯಾಲೆಂಡರ್ ಬರುವ ಮೊದಲು ಭಾರತೀಯರಾದ ನಾವು ನಮ್ಮದೇ ಆದ ಒಂದು ಕ್ಯಾಲೆಂಡರ್ ಅಂದರೆ ಸನಾತನ ಹಿಂದೂ ಧರ್ಮದ ಪಂಚಾಂಗಗಳನ್ನು ಹೊಂದಿದ್ದೆವು ಎಂದು ಇತಿಹಾಸವು ಹೇಳುತ್ತದೆ.

ನಮ್ಮ ಕ್ಯಾಲೆಂಡರ್ ಗಳು ಚಂದ್ರ ಮತ್ತು ಸೂರ್ಯನ ಚಲನವಲನದ ಮೇಲೆ ನಿರ್ಧರಿಸಲಾಗಿದೆ. ಇವುಗಳನ್ನು ಭಾರತದ ಅತ್ಯಂತ ಪುರಾತನ ಗ್ರಂಥವಾದ ಸೂರ್ಯಸಿದ್ಧಾಂತದಲ್ಲಿ ನಮೂದಿಸಲಾಗಿದೆ.

ಸೂರ್ಯ ಸಿದ್ಧಾಂತದಲ್ಲಿ ಪ್ರತಿಗ್ರಹದ ವಿಸ್ತೀರ್ಣ, ಪರಧಿ, ಚಲನದ ಅವಧಿ ಹೀಗೆ ಎಲ್ಲವನ್ನೂ ನಮೂದಿಸಲಾಗಿದೆ. ಇದರ ಆಧಾರದ ಮೇಲೆ ಎಲ್ಲಾ ಖಗೋಳ ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಬಂದಿರುವುದು. ಈ ಗ್ರಂಥದಲ್ಲಿ 14 ಅಧ್ಯಾಯವಿದ್ದು ಅವು ಸಂಸ್ಕೃತದ ಶ್ಲೋಕ ರೂಪದಲ್ಲಿದೆ.

ಸೂರ್ಯ ಸಿದ್ಧಾಂತದಲ್ಲಿ ಭೂಮಿಯನ್ನು ಕೇಂದ್ರೀಕರಿಸಿ ಜ್ಯ ಮತ್ತು ಕೋಜ್ಯ ಅಂದರೆ ಇವತ್ತಿನ ಗಣಿತದ ಟ್ರಿಗ್ನೋಮಿಟ್ರಿಯ Sin and CoSin ನ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ.

ನಕ್ಷತ್ರ ಪುಂಜದ ರೇವತಿ ನಕ್ಷತ್ರವನ್ನು ನಿರ್ಣಾಯಕ ಬಿಂದುವಾಗಿ ಪರಿಗಣಿಸಿ ಸೂರ್ಯನು ಅಂದರೆ ಭೂಮಿಯು ಮತ್ತೊಮ್ಮೆ ರೇವತಿ ನಕ್ಷತ್ರಕ್ಕೆ ಬಂದರೆ ಅದನ್ನು ಒಂದು ಸುತ್ತು ಎಂದು ಪರಿಗಣಿಸಲಾಗಿದೆ. ಹೀಗೆ ಸುತ್ತುವ ಒಂದು ವೃತದ ವಿಸ್ತೀರ್ಣ 360 ಡಿಗ್ರಿ ಆಗಿದ್ದು ಸೂರ್ಯನ ಅಕ್ಷಾಂಶವನ್ನು 12 ಭಾಗಗಳಾಗಿ ವಿಂಗಡಿಸಿ ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ ಸೂರ್ಯನು ಅಂದರೆ ಭೂಮಿಯು ಸಂಚರಿಸುವ ಅವಧಿಯನ್ನು ಒಂದೊಂದು ರಾಶಿಯೆಂದು ಕರೆದು ರಾಶಿಯ ಹೆಸರಿನಲ್ಲಿ ತಿಂಗಳುಗಳ ಹೆಸರನ್ನು ನಮ್ಮ ಭಾರತೀಯ ಪಂಚಾಂಗ ಸೌರಮಾನದ ರೀತಿ ನಮೂದಿಸಿದೆ. ಅದೇ ರಾಶಿಯ ತಿಂಗಳನ್ನು ಚಾಂದ್ರಮಾನದ ರೀತಿ ಚೈತ್ರ ವೈಶಾಖ ಎಂಬ 12 ಹೆಸರುಗಳಿಂದ ನಮೂದಿಸಿದೆ. ಸೂರ್ಯನ ಯಾವ ರಾಶಿಯಲ್ಲಿ ಇರುತ್ತಾನೋ ಅದು ಸೌರಮಾನ ಮಾಸವಾಗಿಯೂ, ಚಂದ್ರನು ಯಾವ ನಕ್ಷತ್ರದಲ್ಲಿ ಹುಣ್ಣಿಮೆಯಲ್ಲಿ ಇರುತ್ತಾನೋ ಅದನ್ನು ಚಂದ್ರಮಾನ ಮಾಸವೆಂದು ಕರೆಯುತ್ತೇವೆ. ಹೀಗೆ 12 ತಿಂಗಳುಗಳನ್ನು ಒಂದು ಸಂವತ್ಸವೆಂದು ಅರವತ್ತು ಸಂವತ್ಸರಗಳನ್ನು ಒಂದು ಕಾಲಚಕ್ರ ಆವೃತ್ತಿ ಎಂದು ಕರೆಯಲಾಗಿದೆ.

punithtwo

ಭಾರತೀಯ ಪಂಚಾಂಗದಲ್ಲಿ ಪರಾಶರ ಮಹರ್ಷಿಯು ಹೇಳಿದಂತೆ ಆ ದಿನದ ಉದಯದಲ್ಲಿ ಯಾವ ಗ್ರಹ ನಮ್ಮ ಭೂಮಿಗೆ ಮೊದಲು ಉದಯಿಸುತ್ತದೆಯೋ ಆ ಗ್ರಹದ ಹೆಸರನ್ನು ಆ ದಿನಕ್ಕೆ ಬಳಸಲಾಗಿದೆ. ಸೂರ್ಯನ ಪ್ರಥಮ ದರ್ಶನವಾದ್ದರಿಂದ ಅದಕ್ಕೆ ಭಾನುವಾರ, ಸೋಮ ಅಂದರೆ ಚಂದ್ರನ ದರ್ಶನವಾಗುವ ದಿನ ಸೋಮವಾರ, ಕುಜ ಅಂದರೆ ಮಂಗಳ ಪ್ರಥಮ ದರ್ಶನವಾಗುವ ದಿನ ಮಂಗಳವಾರ, ಬುಧ ದರ್ಶನವಾಗುವ ದಿನ ಬುಧವಾರ, ಗುರು ದರ್ಶನವಾಗುವ ದಿನ ಗುರುವಾರ, ಶುಕ್ರ ದರ್ಶನ ವಾಗುವ ದಿನ ಶುಕ್ರವಾರ, ಶನಿ ದರ್ಶನವಾಗುವ ದಿನ ಶನಿವಾರ. ಹೀಗೆ ವಾರದ ಏಳು ದಿನಗಳನ್ನು ಗುರುತಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ Sunday Monday Tuesday Wednesday Thursday Friday Saturday ಎಂದು ಬಳಸಲಾಗಿದೆ.

ಪಂಚಾಂಗಕ್ಕೂ Gregorian Calendar ಕ್ಯಾಲೆಂಡರ್ ಗೂ ತನ್ನದೇ ಆದ ವ್ಯತ್ಯಾಸವಿದೆ. ಅದು ತಿಂಗಳ ಹೆಸರಲ್ಲಿ ದಿನಾಂಕ ಅಂದರೆ ನಮ್ಮಲ್ಲಿ ದಿನದ ತಿಥಿ, ಹಬ್ಬ-ಹರಿದಿನಗಳ ಆಚರಣೆಯಲ್ಲಿ, ಹೀಗೆ ಹಲವಾರು ವಿಷಯಗಳಲ್ಲಿ ವ್ಯತ್ಯಾಸ ಕಾಣುತ್ತದೆ.

ನಮ್ಮ ವರ್ಷವೂ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ ಅಂದರೆ ಯುಗಾದಿ ಹಬ್ಬದಂದು ಪ್ರಾರಂಭವಾಗುತ್ತದೆ ಇದು ಅಂದಾಜು ಮಾರ್ಚ್ ಕೊನೆಯಿಂದ ಏಪ್ರಿಲ್ ನ ಮಧ್ಯಭಾಗದವರೆಗೆ.

ಜನವರಿಗೆ ಒಂದನ್ನು ಏಕೆ ಹೊಸ ವರ್ಷದ ದಿನವೆಂದು ಆಚರಿಸುತ್ತಾರೆ ಎಂಬುದು ನಿಖರವಾಗಿ ಎಲ್ಲಿಯೂ ಉಲ್ಲೇಖ ಸಿಗುವುದಿಲ್ಲ.

ಕೆಲವೊಂದು ಇತಿಹಾಸದ ಪುಸ್ತಕಗಳು ರೋಮ್ ನ ದೇವತೆಯಾದ ಜಾನಸ್ ಗೆ ಅರ್ಪಿಸಿ ಆಚರಿಸಲಾಗುತ್ತಿದೆ ಎಂದೂ, ಸಂತ ಕ್ರಿಸ್ತನ ಜನನದ ನಂತರದ 8ನೇ ದಿನದ ಒಂದು ಕಾರ್ಯಕ್ರಮದ ನೆನಪಿಗೆ ಎಂದೂ ಕೆಲವು ಕಡೆ ಉಲ್ಲೇಖವಿದೆ. ಆದರೆ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪ್ರಪಂಚದ ಹಲವಾರು ದೇಶಗಳು ಅಳವಡಿಸಿಕೊಂಡಿರುವುದರಿಂದ ಕ್ಯಾಲೆಂಡರ್ ನ ಮೊದಲ ದಿನವೆಂದು ಬಹಳ ಜನ ಹೊಸ ವರ್ಷವನ್ನು ಜನವರಿ ಒಂದರಂದು ಆಚರಿಸುತ್ತಾರೆ.

ಗ್ರೆಗೋರಿಯನ್ ಕ್ಯಾಲೆಂಡರನ್ನು ಭಾರತದಲ್ಲಿ 1957 ರಲ್ಲಿ ಭಾರತೀಯ ಖಗೋಳ ಪಂಚಾಂಗ ಮತ್ತು ನಾವಿಕ ಪಂಚಾಂಗದ ಅಂಗವಾಗಿ ” ಕ್ಯಾಲೆಂಡರ್ ಸುಧಾರಣಾ ಸಮಿತಿ” ಯಿಂದ ಅಂಗೀಕರಿಸಲಾಯಿತು. ಅಂದಿನಿಂದ ಭಾರತದ ಹಿಂದೂ ಪಂಚಾಂಗದ ಪದ್ಧತಿಯನ್ನು ಸಹ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ನಮೂದಿಸಿ ಭಾರತದಲ್ಲಿ ಸಾಂವಿಧಾನಿಕವಾಗಿ ಅಂಗೀಕರಿಸಲಾಯಿತು. ಆದ್ದರಿಂದ ನಾವು ಇಂದು ಭಾರತದ ಪಂಚಾಂಗದ ತಿಥಿ ವಾರ ನಕ್ಷತ್ರಗಳೊಂದಿಗೆ ನಮೂದಿಸಿರುವ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ವ್ಯವಹಾರಿಕವಾಗಿ ಉಪಯೋಗಿಸುತ್ತಾ ಬಂದಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಜನವರಿ ಒಂದನ್ನು ಭಾರತದಾದ್ಯಂತ ಎಲ್ಲ ಭಾಗಗಳಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ವ್ಯವಹಾರಕ್ಕಾಗಿ ಬಳಸೋಣ ಹೊಸ ವರ್ಷವನ್ನು ಹೊಸ ಸಂವತ್ಸರ ಬಂದಾಗ ಅಂದರೆ ಯುಗಾದಿಯಂದೇ ನಮ್ಮ ಭಾರತೀಯ ಸಂಸ್ಕೃತಿಯಂತೆ ಆಚರಿಸೋಣ.

puniththree

Average rating 4.8 / 5. Vote count: 57

No votes so far! Be the first to rate this post.