ನನ್ನ ಆಶುಭಾಷಣದಲ್ಲಿ ಸಾವರ್ಕರ್ ಸಂಗ್ರಾಮ!
ಅಂದು ಭಾನುವಾರ (22-12-2024) ಒಬ್ಬ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಮಾತನಾಡುವ ಅವಕಾಶ ನನಗೆ ದೊರಕಿದ್ದು ನನ್ನ ಪುಣ್ಯವೇ ಸರಿ. ಒಬ್ಬ ಮಹಾವೀರನ ಬಗ್ಗೆ ಮಾತನಾಡಲು ತಯಾರಿಯಾಗಿ ನಾನು ಬೆಳಗ್ಗೆ ಮನೆಯಿಂದ ಹೊರಟು. ಸರಿಸುಮಾರು ೯ ಗಂಟೆಗೆ ಅಪ್ರತಿಮ ಸ್ವಾತಂತ್ರ್ಯವೀರರಾದ “ವಿನಾಯಕ ದಾಮೋದರ ಸಾವರ್ಕರ್”ರ ಕುರಿತು ಮಾತನಾಡಲು ಹೊರಟೆ…
ಸಾವರ್ಕರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಸಾವರ್ಕರ್ ಎಂದರೆ ಹಿಂದುತ್ವ, ದೇಶಪ್ರೇಮ, ದೇಶಭಕ್ತಿ ಇಂತಹ ಒಬ್ಬ ಮಹಾವ್ಯಕ್ತಿಯ ಬಗ್ಗೆ ನಾನು ಮಾತನಾಡಲು ತಯಾರಾಗಿದ್ದೆ. ನಾನು ಸಾವರ್ಕರ್ ರವರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನನಗೆ ಒಂದು ಹೆಮ್ಮೆಯ ವಿಚಾರವಾಗಿತ್ತು. ಹೀಗೆ ನಾನು ತಯಾರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಡದ ಹತ್ತಿರ ಹೋಗಿ ಒಳಗೆ ಪ್ರವೇಶಿಸಿದೆ…
ನನಗೆ ಮತ್ತೊಂದು ಸಂತಸದದ ಸಂಗತಿ ಏನೆಂದರೆ ಆ ಸ್ಪರ್ಧೆಯಲ್ಲಿ ನನ್ನ ಶಾಲೆಯ ನನ್ನ ಸ್ನೇಹಿತರು ಸಹ ಭಾಗವಹಿಸಿದ್ದರು. ಜೊತೆಗೆ ಇತರೆ ಹಲವಾರು ಶಾಲೆಗಳಿಂದ ಮಕ್ಕಳು ಸ್ಪರ್ಧೆಗೆ ಆಗಮಿಸಿದ್ದರು. ಅಂದು ಅವರೆಲ್ಲರ ಮುಂದೆ ನಾನು ಅಲ್ಲಿ ಅವರೊಂದಿಗೆ ಅದ್ಭುತ ಆತ್ಮದ ಬಗ್ಗೆ ಚರ್ಚಿಸುತ್ತಿದ್ದೆ… ಅಲ್ಲಿಗೆ ಭಾಗವಹಿಸಲು ಬಂದಿದ್ದ ಇತರೆ 45 ಜನರೂ ಸಹ ಸಿದ್ಧರಾಗಿ ಕುಳಿತಿದ್ದರು. ಮೂರು ಜನ ಮಾತನಾಡಿದ ನಂತರ ನನ್ನ ಸರದಿ.
ನಾನು ಮಾತನಾಡುವ ಮುನ್ನ ತಾಯಿ ಭಾರತ ಮಾತೆಗೆ ನಮಿಸಿ ಮುಂದೆ ಹೋದೆ. ಆಶುಭಾಷಣ ಸ್ಪರ್ಧೆಗೆ ಮೊದಲೆ ಸಿದ್ಧಪಡಿಸಿದ್ದ ಚೀಟಿಯನ್ನು ತೆಗೆದೆ ಆಗ ನನಗೆ ಸಿಕ್ಕ ವಿಷಯವೆಂದರೆ ಸಾವರ್ಕರ್ ಮತ್ತು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ನನಗೆ ವಿಷಯವನ್ನು ನೋಡಿ ಬಹಳ ಸಂತೋಷವಾಯಿತು.
ಮಾತನಾಡಲು ಪ್ರಾರಂಭಿಸಿದೆ ಐದು ನಿಮಿಷಗಳು ಕಳೆದದ್ದು ನನಗೆ ಗೊತ್ತೇ ಆಗಲಿಲ್ಲ! ಆ ಒಂದು ಅಗಾಧ ಪ್ರತಿಭೆಯ ಬಗ್ಗೆ ಅ ಐದು ನಿಮಿಷಗಳಲ್ಲಿ ಹೇಳಿ ಮುಗಿಸುವುದು ನನಗೆ ಸ್ವಲ್ಪ ಕಷ್ಟವೆನಿಸಿತು. ಆದರೂ ನಾನು ಹೇಳಿ ಮುಗಿಸಿದೆ.
ನಂತರ ಮಾರನೇ ದಿನ ನನಗೆ ವಿಷಯ ತಿಳಿಯಿತು. ಆ ಸ್ಪರ್ಧೆಯಲ್ಲಿ ಭಾಗವಹಿಸಿದ ನನಗೆ ಮೊದಲನೆಯ ಬಹುಮಾನ ದೊರಕಿತು ಎಂಬ ವಿಷಯ ಕೇಳಿ ನನಗೆ ಬಹಳ ಸಂತೋಷವಾಯಿತು. ಅದನ್ನು ನಾನು ಸಾವರ್ಕರ್ ಅವರ ಆಶೀರ್ವಾದ ಎಂದು ಭಾವಿಸಿದೆ. ಇದು ನನ್ನ ಆ ದಿನದ ಅನುಭವ. ಇಂತಹ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ನನ್ನ ಪೂರ್ಣ ಚೇತನ ಪಬ್ಲಿಕ್ ಶಾಲೆಗೆ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಧನ್ಯವಾದಗಳು.