ಬಡವನ ಜನುಮ
ಯಾರಿಗೆ ಬೇಕು ಈ ಬವಣೆಯ ಜೀವನವು
ಯಾವಾಗಲೂ ಬರಿ ಕಷ್ಟ ನೋವು!
ಯಾವ ಜನಮದ ಪಾಪವು?
ಯಾರಿಗೂ ಸಿಗಬಾರದು ಇಂತಹ ಜನುಮವು!
ಶ್ರೀಮಂತರು ಹಾಳು ಮಾಡುವ ಒಂದು ಹೊತ್ತಿನ ಊಟವು…
ಸಿಕ್ಕರೆ ಸಾಕು ಬದುಕುವುದು ಒಂದು ಬಡ ಸಂಸಾರವು…
ಇದನರಿತು ನಡೆದರೆ ಮಾನವನ ಆಲೋಚನೆಯು…
ಒಮ್ಮೆ ಪಾವನವಾಗುವುದು ಎಲ್ಲರ ಜೀವನವು!