ನನ್ನ ಜೀವಾಳ – ನನ್ನ ಅಮ್ಮ
ಅಮ್ಮನೇ ನನ್ನ ಗುರಿ,
ಅಮ್ಮನೇ ನನ್ನ ದಾರಿ,
ನಿನ್ನ ಪ್ರೀತಿಯ ಜ್ಯೋತಿಯಲ್ಲಿ ನಾನು ಬೆಳೆಯುವೆ, ಓ ಅಮ್ಮ!
ನನ್ನ ಜೀವನದಲ್ಲಿ ಅಮ್ಮನ ಸ್ಥಾನ ಅಮೋಘ. ಅವಳು ಕೇವಲ ತಾಯಿಯಲ್ಲ, ನನ್ನ ದಾರಿದೀಪ, ಪ್ರೇರಣೆ, ಮತ್ತು ಜೀವಂತ ದೇವತೆ. ಅವಳ ಆರಾಧ್ಯತೆಯ ಮೆಟ್ಟಿಲುಗಳಲ್ಲಿ ನನ್ನೆಲ್ಲ ಕನಸುಗಳು ಬೆಳೆದು ಬೆಳಗುತ್ತವೆ.
ನನ್ನ ಅಮ್ಮನ ಹೆಸರು ಗೌರಮ್ಮ. ಜೀವನ ಪಯಣದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದರೂ, ಧೈರ್ಯವನ್ನು ಎಂದೂ ಕಳೆದುಕೊಳ್ಳದ ಅವಳ ಸಂಯಮ ನನ್ನ ಜೀವನದ ಪಾಠವಾಗಿದೆ. ನನ್ನ ಅಜ್ಜ–ಅಜ್ಜಿ ಮಹದೇವಮ್ಮ ಮತ್ತು ಮಲ್ಲಯ್ಯ ಅವರಿಗೆ ಐದು ಹೆಣ್ಣುಮಕ್ಕಳು, ಅವರಲ್ಲಿ ನನ್ನ ಅಮ್ಮ ನಾಲ್ಕನೆಯವರು. ಬಡತನದ ನೆರಳಿನಲ್ಲಿ ಬೆಳೆದರೂ, ಅಮ್ಮನ ಕನಸುಗಳು ಬೆಳಕಿಗೆ ಸಮಾನ.
ಚಿಕ್ಕವಳಿದ್ದಾಗಲೇ ಬೆಳಗಿನ ಜಾವ ಎದ್ದು ಇತರರ ಮನೆಗಳಲ್ಲಿ ಕೆಲಸ ಮುಗಿಸಿ, ನಂತರ ಸರ್ಕಾರಿ ಶಾಲೆಗೆ ಹೋಗುತ್ತಿದ್ದಳು. ಅಜ್ಜಿ ಪ್ರತಿ ಶನಿವಾರ ನೀಡುತ್ತಿದ್ದ ಒಂದೇ ಒಂದು ರೂಪಾಯಿಯೇ ಅಮ್ಮನಿಗೆ ಸಂತೋಷದ ಅರ್ಥ ಕಲಿಸಿತ್ತು. ಸ್ನೇಹಿತರ ಜೊತೆ ಅದನ್ನು ಹಂಚಿಕೊಂಡು ತಿಂಡಿಗಳನ್ನು ತಿನ್ನುತ್ತಾ ಆ ಮುಗ್ಧ ಬಾಲ್ಯ ಸಾಗಿತ್ತು.
ಆರೋಗ್ಯ, ಬಡತನ, ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಅಮ್ಮನ ವಿದ್ಯಾಭ್ಯಾಸ ಎಂಟನೇ ತರಗತಿಯವರೆಗೆ ಮಾತ್ರ ನಿಂತಿತು. ಕುಟುಂಬದ ನಿರ್ಧಾರದಲ್ಲಿ ಮದುವೆಯೇ ಮುಂದಿನ ಹೆಜ್ಜೆಯಾಯಿತು. ಮೊದಲಿಗೆ ಅಮ್ಮನ ಅಕ್ಕನಿಗೆ ಮದುವೆ ನಿಶ್ಚಯವಾಯಿತು. ವರನಾಗಿ ತೋರಿಸಿದ ವ್ಯಕ್ತಿ ಬರುವುದರಂತೆ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಆ ವ್ಯಕ್ತಿಗೆ ಅಮ್ಮನ ಅಕ್ಕ ಇಷ್ಟವಾಗದೇ. ಅದೇ ವರ ನನ್ನ ಅಮ್ಮನನ್ನು ನೋಡಿದಾಗ ಮಾತ್ರ, ಅವಳ ಸೌಂದರ್ಯ, ಶಿಷ್ಟಾಚಾರ, ಮತ್ತು ವಿನಯ ಅವನ ಹೃದಯ ಗೆದ್ದಿತು. ಕೊನೆಗೆ, ಆ ವರನೇ ನನ್ನ ಅಮ್ಮನನ್ನು ಮದುವೆಯಾಗಲು ನಿರ್ಧರಿಸಿದರು.
ಅಮ್ಮನ ತ್ಯಾಗ ಮತ್ತು ಶ್ರಮ
ಮದುವೆಯ ನಂತರ, ನಮ್ಮ ಕುಟುಂಬದ ಜವಾಬ್ದಾರಿಯು ಸಂಪೂರ್ಣವಾಗಿ ಅಮ್ಮನ ಹೆಗಲ ಮೇಲೆ ಬಿತ್ತು. ನನ್ನ ಮತ್ತು ನನ್ನ ತಂಗಿಯ ಜನನದ ನಂತರ, ಈ ಜವಾಬ್ದಾರಿ ಇನ್ನಷ್ಟು ಹೆಚ್ಚಿತು. ಆದರೆ, ನಮ್ಮ ಕುಟುಂಬದ ಹೃದಯಭಾರ ತೀರದ ಇನ್ನೊಂದು ನೋವು ಅಮ್ಮನನ್ನು ಕಾಡುತ್ತಿತ್ತು, —ನನ್ನ ಅಪ್ಪ ಅವರ ಹುಟ್ಟಿದ ಕೆಲವೇ ತಿಂಗಳಲ್ಲಿ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು.
ಈ ದೈಹಿಕ ಸವಾಲು ನಮ್ಮ ಕುಟುಂಬದ ಆರ್ಥಿಕ ಹಾಗೂ ಮಾನಸಿಕ ಒತ್ತಡವನ್ನು ಹೆಚ್ಚಿಸಿತು. ಈ ಎಲ್ಲಾ ಸವಾಲುಗಳ ನಡುವೆ ಅಮ್ಮ ಹೆದರದೆ, ಸೋಲದೆ ಜೀವನವನ್ನು ನಿಭಾಯಿಸಿದರು.
ಸೋಲು, ನೋವು, ಮತ್ತು ಅಮ್ಮನ ಅವಿರತ ಶ್ರಮ
ನಮ್ಮ ಕುಟುಂಬದಲ್ಲಿ ವರದಕ್ಷಿಣೆ ನೀಡಿಲ್ಲವೆಂದು ಅಜ್ಜಿ (ಅಪ್ಪನ ತಾಯಿ) ಅಮ್ಮನಿಗೆ ಅನೇಕ ಕಷ್ಟಗಳನ್ನು ಕೂರ್ತಿದ್ದರು. ಆದರೆ ಅಮ್ಮ ಯಾವುದಕ್ಕೂ ಧೃತಿಗೆಡದೆ ಯಾರ ಮೇಲೂ ದ್ವೇಷವಿಲ್ಲದೆ, ಪ್ರೀತಿಯಿಂದ ಕುಟುಂಬವನ್ನು ಮುನ್ನಡೆಸಿದಳು. ಆಕೆಯ ಶ್ರಮ ನಮ್ಮೆಲ್ಲರ ಮೇಲೆ ಅಪಾರ ಪ್ರಭಾವ ಬೀರುತ್ತದೆ.
ನಾನು ಮತ್ತು ನನ್ನ ತಂಗಿಯು ಚೇತರಿಸಿಕೊಳ್ಳಲು, ಕಲಿಯಲು, ಮತ್ತು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಲು ನಮ್ಮ ಅಮ್ಮನ ತ್ಯಾಗವೇ ನಮ್ಮ ಶಕ್ತಿ. ನಾವು ಬಡತನವನ್ನು ಗೆದ್ದು, ಶಿಕ್ಷಣದ ಬೆಳಕಿನಲ್ಲಿ ನಮ್ಮ ಅಮ್ಮ–ಅಪ್ಪನಿಗೆ ಬೆಳಕಾಗಬೇಕೆಂಬ ಗಟ್ಟಿಯಾದ ಸಂಕಲ್ಪವಿದೆ. ದೇವರ ಮುಂದೆ ನಾನು ಯಾವಾಗಲೂ “ನಮ್ಮ ಅಪ್ಪ–ಅಮ್ಮಗೆ ದೀರ್ಘಾಯುಷ್ಯ ಮತ್ತು ಆರೋಗ್ಯ ನೀಡಲಿ.” ಎಂದು ಬೇಡಿಕೊಳ್ಳುವೆ.
ನನಗೆ ಯಾವಾಗಲಾದರೂ ಸಂಕಟ ಬಂದರೆ, ಅಮ್ಮನೇ ನನ್ನೆದುರು ಬಂದು ರಕ್ಷಿಸುತ್ತಾಳೆ. ಅವಳ ಪ್ರೀತಿ, ತ್ಯಾಗ, ಮತ್ತು ಅನುಭವಗಳೇ ನನ್ನ ಬದುಕಿನ ಶಿಲ್ಪಿಗಳು.
“ಕಷ್ಟಪಟ್ಟು ದುಡಿದರೆ, ಸಫಲ ಜೀವನ ನಮ್ಮದಾಗುವುದು.”
I love you, Amma. ❤️