ನೆಮ್ಮದಿಯ ಹಾದಿ
ಕಾನನವ ನೋಡಿದರೆ ನೆನಪಾಗುವುದು
ಪ್ರಾಣಿ, ಪಕ್ಷಿ, ಸುಂದರವಾದ ನದಿ,
ಇದೇ ನೋಡಿ ಪ್ರಕೃತಿಯ ನೆಮ್ಮದಿಯ ಹಾದಿ!
ಹಗಲಿರುಳು ಇರಬಹುದು ನಾವಿಲ್ಲಿ,
ನೆಮ್ಮದಿಯ ಜೀವನದ ಪಯಣದ ಜೊತೆಯಲ್ಲಿ.!
ಕಾಡಿನ ಮಧ್ಯದಿ ಮನೆಯೊಂದನು ಕಟ್ಟಿ,
ಕನಸಿನ ತಾಣಕ್ಕೆ ಹಾರುವೆನು ಕದವನ್ನು ತಟ್ಟಿ!
ಮುಂಜಾನೆ ಮೂಡುವುದು ಸೂರ್ಯನ ಕಾಂತಿ,
ಇಲ್ಲಿದ್ದರೇ ನಮಗೆಲ್ಲರಿಗೂ ಶಾಂತಿ.!