ಕರುನಾಡ ಕಲಿಗಳು

ನಮ್ಮ ನಾಡು ಕರ್ನಾಟಕ ಹಲವಾರು ವೈಶಿಷ್ಟ್ಯಗಳಿಂದ ಪ್ರಸಿದ್ಧವಾಗಿದೆ. ಈ ನಾಡು ಮನಮೋಹಕವಾದ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದು, ವೀರರಿಗೂ ಧೀರರಿಗೂ ತವರಾಗಿದೆ. ಸಂಗೀತ, ಸಾಹಿತ್ಯ, ಶಿಲ್ಪಕಲೆ, ನೃತ್ಯ, ನಾಟಕ ಮುಂತಾದ ಅನೇಕ ಸಾಂಸ್ಕೃತಿಕ ಸಂಪತ್ತನ್ನು ಹೊತ್ತು ನಿಂತಿರುವ ಹೆಮ್ಮೆಯ ನಾಡು ನಮ್ಮ ಕರ್ನಾಟಕ.
ನಮ್ಮ ನಾಡಿನಲ್ಲಿ ಅನೇಕ ಮಹಾನ್ ಕಲಿಗಳು ಜನಿಸಿ ಬೆಳೆದಿದ್ದಾರೆ. ಇವರು ತಮ್ಮ ಸ್ವಾರ್ಥಕ್ಕಾಗಿ ಯಾವತ್ತೂ ಹೋರಾಡಲಿಲ್ಲ; ಬದಲಾಗಿ ನಮ್ಮ ನಾಡು, ನುಡಿ ಹಾಗೂ ಜನರಿಗಾಗಿ ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದ ಮಹಾನರು. ಅವರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮ ಇಂದಿಗೂ ನಮಗೆ ಸ್ಪೂರ್ತಿದಾಯಕವಾಗಿದೆ.

ಇವರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಅವರು ನಮ್ಮ ನಾಡಿನ ಸ್ವಾಭಿಮಾನವನ್ನು ಕಾಪಾಡಲು ತೋರಿದ ಛಲ ಅಪಾರವಾದದ್ದು. ಒನಕೆ ಓಬವ್ವ ಅವರು ಸಾಮಾನ್ಯ ಮಹಿಳೆಯಾಗಿದ್ದರೂ, ಶತ್ರುಗಳ ಭೀತಿಯನ್ನು ಲೆಕ್ಕಿಸದೆ ನಮ್ಮ ನಾಡಿನ ರಕ್ಷಣೆಗೆ ಧೈರ್ಯದಿಂದ ಹೋರಾಡಿದ ವೀರನಾರಿ. ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾಧೀರ. ಜಿ.ಜಿ. ಬೇವೂರ ಅವರ ನಿಸ್ವಾರ್ಥ ಸೇವೆ ಮತ್ತು ಧೈರ್ಯ ಇಂದಿನ ಜನತೆಗೆ ಆದರ್ಶವಾಗಿದೆ.

ಈ ಮಹಾಧೀರರ ದೇಶಪ್ರೇಮ, ತ್ಯಾಗ ಮತ್ತು ಶೌರ್ಯ ಸಮಸ್ತ ಜನತೆಗೆ ದಾರಿದೀಪವಾಗಿದೆ. ಈ ಮಹನೀಯರ ಕಥೆಗಳು ಕೇವಲ ಇತಿಹಾಸವಲ್ಲ; ಅವು ನಮ್ಮ ಜೀವನದ ಪಾಠಗಳು. ಅವರ ಆದರ್ಶಗಳನ್ನು ನೆನಸಿಕೊಂಡು ನಾವು ಒಳ್ಳೆಯ ನಾಗರಿಕರಾಗಿ ಬೆಳೆದಾಗ ಮಾತ್ರ ನಮ್ಮ ಕರುನಾಡಿಗೆ ನಿಜವಾದ ಗೌರವ ತೋರಿದಂತಾಗುತ್ತದೆ. ಅವರ ತ್ಯಾಗವನ್ನು ಸ್ಮರಿಸುತ್ತಾ ನಾವು ನಮ್ಮ ನಾಡಿನ ಕೀರ್ತಿಯನ್ನು ಸದಾ ಎತ್ತರದಲ್ಲಿರಿಸಬೇಕು.
