Button Icon
Skip to content
 
 
 
 
 
 
 
Total Visitors: 248

Mahesh Kumar

ಮೈಸೂರು ಜಿಲ್ಲೆ ಬನ್ನೂರು ಬಳಿ ಇರುವ ಹನುಮನಾಳು ಎಂಬ ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿರುವ ಸೋಮಶೇಖರ ಮತ್ತು ತಾಯಮ್ಮ ಎಂಬ ರೈತ ದಂಪತಿಗಳ ಮಗನಾದ ಮಹೇಶ್ ಎಚ್ ಎಸ್ ಪೂರ್ಣ ಚೇತನ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಇದೇ ಶಾಲೆಯಲ್ಲಿ 27-ಜುಲೈ 2024 ರಂದು ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ ರೆಕಾರ್ಡ್ಸ್ ನವರು ನಡೆಸಿದಂತಹ ವಿಶ್ವ ದಾಖಲೆಯಲ್ಲಿ ವಯಕ್ತಿಕ ವಿಭಾಗದಲ್ಲಿ ಭಾಗವಹಿಸಿ ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನ, ಅವರ ಸಾಧನೆ ಮತ್ತು ಇಡೀ ಜಗತ್ತಿಗೆ ಅವರ ಕೊಡುಗೆಗಳ ಬಗ್ಗೆ ಸತತ 14 ಗಂಟೆ 2 ನಿಮಿಷಗಳ ಕಾಲ ಮಾತನಾಡಿ ಈ ಚಿಕ್ಕವಯಸ್ಸಿನಲ್ಲಿಯೇ ವಿಶ್ವ ದಾಖಲೆಯನ್ನು ಮಾಡಿರುತ್ತಾರೆ. ಬಹುಮುಖ ಪ್ರತಿಭೆಯುಳ್ಳ ಹಾಗೂ ಯುವ ಬರಹಗಾರರಾಗಿ ಕನ್ನಡ ಸಾಹಿತ್ಯದ ಸಿರಿವಂತಿಕೆಯನ್ನು ಪಸರಿಸುವ ಸೇವಾ ಮನೋಭಾವವನ್ನು ಹೊಂದಿರುತ್ತಾರೆ.