ನಮ್ಪಾಠ್ಶಾಲೆ
ನಾರಿಕೇಳದೂರಿನಲ್ಲಿ ಚಂದ್ರ ಚುಕ್ಕಿ ತಾರೆಯಲ್ಲಿ
ರಾಮಮೋಹನ ಲಕ್ಷ್ಮಿಕಾಂತಮ್ಮನವರ ದಾಂಪತ್ಯದಲ್ಲಿ
ಕೊಡುಗೈದಾನಿಯಾಗಿ ದಾನಮಾಡೌವ್ರೆ||
ಧರಿತ್ರಿಯಲ್ಲಿ ಹುಡುಕಿದ್ರೂ ಸಿಗೋದಿಲ್ಲ ಹದಿನಾಲ್ಕು ಎಕ್ರೆಯಲ್ಲಿ
ಅಕ್ಷರಾ-ದಾಸೋಹ ಜ್ಞಾನ ಪಡ್ದ ಮಕ್ಕಳೆಲ್ಲ ಜಾಣರಾಗೌವ್ರೆ |೧|
ಸಂಸ್ಕಾರ ಸಂಪನ್ನತೆ ಸೌಭಾಗ್ಯಪಡೆದಂತ ಮಕ್ಕಳೆಲ್ಲ
ಸೇರಿಕೊಂಡು ಭಗವದ್ಗೀತೆ ಹೇಳುತಲಿ ದ್ವಾಪರಕ್ಕೆ ಕರ್ಕೊಂಡೊಗ್ತಾರೆ||
ರಾಮನಾಮ ಸ್ಮರಣೆ ಮಾಡ್ತಾ ಹನುಮನನ್ನು ಜಪಿಸುತ್ತಾ
ಮನೆಯಿಂದ ಗಂಗಾ ತುಂಗಾ ಕಾವೇರಿ ರಥವೇರಿ ಶಾಲೆಗ್ಬರ್ತಾರೆ||
ಸೋಮ ಮಂಗ್ಳ ಬುಧ ಗುರು ಶುಕ್ರ ಶನಿವಾರ್ದಂದು ಪ್ರತ್ಯೇಕ ಶ್ಲೋಕ ಹಾಡ್ತಾರೆ |೨|
ಶಾಲಾದೇಗುಲ್ದೊಳ್ಗೆ ಕುಳ್ತು ಚಂದದಿಂದ ಚಾಮರದಡಿ ಪಾಠಕಲಿತಾವ್ರೆ
ಶುಚಿಸುಖ ಪಡೆಯುತ್ತ ಹಣ್ಣುಹಂಪ್ಲು ಮೆಲ್ಲುತ್ತ ಗಂಧದಿತ ಸೇವಿಸ್ತಿರ್ತಾರೆ
ಹಾಡು ಹೇಳ್ತ ಸಂಗೀತ ತಾಳದಂತೆ ಹೆಜ್ಜೆಇಡ್ತಾ ನೃತ್ಯಮಾಡ್ತಾರೆ|
ಕೆಸ್ರುಗದ್ದೆ ಕೆನೆಮೊಸ್ರು ಮೈಮೇಲೆಲ್ಲಾ ಮೆತ್ತಿಕೊಂಡು
ಹಗ್ಗಹಿಡ್ದು ಹುರಿಮಾಡ್ತ ಹೊಂಗೆನಾರಿನಂತೆ ಶಕ್ತಿ ಪಡ್ದೇಬಿಡ್ತಾರೆ |೩|
ಮರ್ಮರ್ಕೆ ಕಟ್ಟಿದಂತ ಮೊನಚಾದ ಮಲ್ಲೆಹಿಡ್ದು ಗಿರ್ಗಿರ್ಕಿ ಹೊಡ್ತೇಬಿಡ್ತಾರೆ
ಜಿಪ್ಲೈನು ಹಿಡ್ಕೊಂಡು ಜುರ್ರಂತ ಜಾರ್ಕೊಂಡು ಜೋಗದ್ಗುಂಡಿ ಗಂಗೆ ಜಿಗ್ದಂಗೆ ಜಿಗ್ದೇಬಿಡ್ತಾರೆ
ಎಣ್ಣೆಹೊಳೆ ಭೂಮಿಗಿಳ್ದು ಬಸ್ಸೊಪ್ಪಿನ್ಸಾರಿನಂತೆ ಬೊರ್ರೆನ್ನೋ
ನೀರ್ಮಿಂದು ಮನೆಗೊರ್ಟು ನಿಂತೇಬಿಡ್ತಾರೆ|
ಅಮ್ಮ ಕೊಟ್ಟ ಎಳ್ಳುಂಡೆ ಮೆಲ್ಮೆಲ್ತಾ..ಗುರ್ಗಳ್ಕೊಟ್ಟ ಪಾಠಪದ್ಯ ಕಲ್ತೇಬಿಡ್ತಾರೆ
ಅಭ್ಯಾಸ ನಾಮಜಪ ಬರ್ದ್ಬುಟ್ಟು ನಿದ್ರಾದೇವಿ ಶ್ಲೋಕಹೇಳ್ತಾ ಮಲ್ಗೇಬಿಡ್ತಾರೆ |೪|