ಗೆಳತಿ

ನಾ ಕಂಡ ಹುಣ್ಣಿಮೆಯ ಬೆಳದಿಂಗಳು ನೀನೆ ಗೆಳತಿ!
ಆ ಹುಣ್ಣಿಮೆಯು ತಂದ ಸ್ವಚ್ಛಂದ ಕಾಂತಿ ನೀನೆ ಗೆಳತಿ!
ಆನಂದದ ಅಲೆಯಲ್ಲಿ ತೇಲಾಡಿಸುವ ನಿನ್ನ ಮುಗುಳುನಗೆಗೆ
ಕವಿತೆಗಳ ಸಾಲ ಪಡೆದ ಸಾಲಗಾತಿ ನಾನು.!
ಮುಸುಕು ಮುಂಜಾವದಲಿ ತುಸುಮೆಲ್ಲನೇ ಜಾರುತಿದೆ
ನನ್ನೀ ಮುಸುಕು ನಿನ್ನೆಡೆಗೆ ಕಾರಣವೇನು…?
ನೀನೆ ನನ್ನ ಜೀವನ !
ನಿನ್ನಲ್ಲಿ ಇರಿಸುವೆ ನನ್ನ ‘ಜೀವ‘ ನಾ!
ನನ್ನ ಜೀವನದ ಮೊದಲ ಗೆಳತಿಯಾಗಿಹೆ ನೀ.!
ಗೆಳತಿ ಎಂದರೆ ಸಾಲದು ಎರಡನೆ ತಾಯಿಯೇ ಆಗಿಹೆ ನೀ.!
ನನ್ನ ಕನಸುಗಳ ಎಲ್ಲ ಹಾದಿಯಲಿ ನೀನೇ ಬೆಳಕು !
ನನ್ನ ನಗುವಿನ ಹಿಂದಿದೆ ನಿನ್ನ ನೆನಪಿನ ಮೆಲುಕು!
ಬಾಳ ಹಾದಿಯ ಅಲೆಗಳ ನಡುವೆ ನೀನೇ ಆಧಾರ!
ಗೆಳತಿ — ನೀನಿಲ್ಲದೆ ನನ್ನ ಜೀವನವೆಲ್ಲ ನಿರಾಧಾರ.!
