ಮಾತು ಕಲಿಯುವ ಮೊದಲು ಮಾತನಾಡುವ ಪದವೇ ಅಮ್ಮ
ನಿದ್ದೆ ಮಾಡದೇ ಇದ್ರೆ ಹೇಳುವಳು ಬರುವುದು ಗುಮ್ಮ.
ಬದುಕಿನಲ್ಲಿ ಮುಖ್ಯವಾದ ಜೀವ, ವರ್ಣಿಸಲಾಗದು ಇವಳ ಭಾವ
ಜೀವನದಲ್ಲಿ ಇವಳು ಅನಿವಾರ್ಯ, ಇವಳು ಇಲ್ಲದಿದ್ದರೆ ಮುಂದೆ ಹೋಗದು ಯಾವುದೇ ಕಾರ್ಯ
ಅಮ್ಮ, ನೀನು ಬೆಲೆ ಕಟ್ಟಲಾಗದಷ್ಟು ದೊಡ್ಡವಳು, ಬೆಲೆ ಕಟ್ಟಿದರೆ ಆಗುವೆ ಚಿಕ್ಕವನು.