ಕರಾಳ ಮುಖದ ಅಂತಃಕರಣ
ಬೆಳಗಿನ ಜಾವದ ಹಕ್ಕಿಯ ಚಿಲಿಪಿಲಿಯೊಂದಿಗೆ ಪ್ರತಿದಿನ ಶುರುವಾಗುವ ಸುಜಾತಳ ಬದುಕು ಇಳಿ ಸಂಜೆಯವರೆಗೂ ಸಮಯ ಸಾಗುವುದೇ ತಿಳಿಯದ ಹಾಗೆ ದುಡಿವ ಗಾಣದ ಎತ್ತಿನಂತೆ ಸಾಗುತ್ತಿತ್ತು. ಸುಜಾತ ಮೈಸೂರಿನ ಅರಣ್ಯ ಇಲಾಖೆಯಲ್ಲಿ ಟೈಪಿಸ್ಟ್ ಆಗಿದ್ದಳು. ಅವಳದೇ ಆದ ಚಿಕ್ಕ ಮತ್ತು ಚೊಕ್ಕದಾದ ಸಂಸಾರ. ತನ್ನ ಗಂಡ ಮತ್ತು 2 ಸುಂದರವಾದ ಹೆಣ್ಣು ಮಕ್ಕಳೊಂದಿಗೆ ಚಿಕ್ಕದಾದ ಸಂಸಾರವನ್ನು ತೂಗುತ್ತಿದ್ದಳು. ಸುಜಾತಾಳ ಬದುಕು ಮತ್ತು ಭಾವನೆ ತನ್ನ ಕುಟುಂಬಕ್ಕೆ ಮಾತ್ರ ಮೀಸಲಾಗಿತ್ತು, ತನಗಾಗಿ ಏನನ್ನು ಮಾಡಿಕೊಳ್ಳದೆ, ಸಂಸಾರದ ಹೆಚ್ಚಿನ […]