ಮರಳಿ ಬ೦ದ ಜೀವ
ಮೈಸೂರಿನಲ್ಲಿ ಲಿಂಗಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗಳಿಗೆ ೭ ಜನ ಮಕ್ಕಳು ಇದ್ದರು. ಬಂದದ್ದು ಬರಲಿ ಭಗವಂತನ ದಯೆ ಇರಲಿ ಎಂಬಂತೆ ಇವರ ಸಂಸಾರ ನಿರ್ವಹಣೆಗಾಗಿ ಒಂದು ಚಿಕ್ಕ ಎಳನೀರು ಅಂಗಡಿ ಇಟ್ಟುಕೊಂಡಿದ್ದರು. ಇವರ ಏಳು ಮಕ್ಕಳಲ್ಲಿ ಶಾಂತಕುಮಾರಿ ನಾಲ್ಕನೆಯವರು. ಇವರು ದಿನಾಂಕ ೧೭-೭-೧೯೫೯ರಲ್ಲಿ ಜನಿಸಿದರು.ಇವರು ಕೇವಲ ೧೦ನೇ ತರಗತಿವರಗೆ ಮಾತ್ರ ಓದಿದರು, ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ ಕಾರಣ ಅವರಿಗಿದ್ದ ಅತಿಯಾದ ಬಡತನ. […]