ನಮ್ಪಾಠ್ಶಾಲೆ
ನಾರಿಕೇಳದೂರಿನಲ್ಲಿ ಚಂದ್ರ ಚುಕ್ಕಿ ತಾರೆಯಲ್ಲಿ ರಾಮಮೋಹನ ಲಕ್ಷ್ಮಿಕಾಂತಮ್ಮನವರ ದಾಂಪತ್ಯದಲ್ಲಿ ಕೊಡುಗೈದಾನಿಯಾಗಿ ದಾನಮಾಡೌವ್ರೆ|| ಧರಿತ್ರಿಯಲ್ಲಿ ಹುಡುಕಿದ್ರೂ ಸಿಗೋದಿಲ್ಲ ಹದಿನಾಲ್ಕು ಎಕ್ರೆಯಲ್ಲಿ ಅಕ್ಷರಾ-ದಾಸೋಹ ಜ್ಞಾನ ಪಡ್ದ ಮಕ್ಕಳೆಲ್ಲ ಜಾಣರಾಗೌವ್ರೆ |೧| ಸಂಸ್ಕಾರ ಸಂಪನ್ನತೆ ಸೌಭಾಗ್ಯಪಡೆದಂತ ಮಕ್ಕಳೆಲ್ಲ ಸೇರಿಕೊಂಡು ಭಗವದ್ಗೀತೆ ಹೇಳುತಲಿ ದ್ವಾಪರಕ್ಕೆ ಕರ್ಕೊಂಡೊಗ್ತಾರೆ|| ರಾಮನಾಮ ಸ್ಮರಣೆ ಮಾಡ್ತಾ ಹನುಮನನ್ನು ಜಪಿಸುತ್ತಾ ಮನೆಯಿಂದ ಗಂಗಾ ತುಂಗಾ ಕಾವೇರಿ ರಥವೇರಿ ಶಾಲೆಗ್ಬರ್ತಾರೆ|| ಸೋಮ ಮಂಗ್ಳ ಬುಧ ಗುರು ಶುಕ್ರ ಶನಿವಾರ್ದಂದು ಪ್ರತ್ಯೇಕ ಶ್ಲೋಕ ಹಾಡ್ತಾರೆ |೨|