ಎರಡು ಮನಸ್ಸಿನ ನಂಟು!

ಹೆಗಲಿಗೆ ಹೆಗಲು, ಮನಸ್ಸಿಗೆ ಮನಸ್ಸುಅನುರಾಗದ ಕನಸುಹಸನ್ಮುಖಿಯಾಗಿರುವ ಎರಡು ಮನಸ್ಸುನಮ್ಮ ಪವಿತ್ರ ನಂಟು, ಈ ಗೆಳೆತನ !ಸುಖದಲ್ಲಿ ಸಹಪಾಠಿಯಾಗಿರುವೆದುಃಖದಲ್ಲೂ ನನ್ನ ಕೈಯನ್ನು ಹಿಡಿದಿರುವೆ.ಯಾರೇ ತೆಗಳಿದರೂ ನನ್ನ ಜೊತೆ ನೀನಿರುವೆ.ನಮ್ಮ ಪವಿತ್ರ ನಂಟು, ಈ ಗೆಳೆತನ!ಈ ನಂಟು ನಮ್ಮ ಬಾಳಿನ ಶ್ರೀಗಂಧದೂರವಾದರೂ ಮರೆಯಲಾರದ ಈ ಬಂಧ.ಇದಾಗಿದೆ ಎರಡು ಹೃದಯಗಳ ಅನುಬಂಧ.ನಮ್ಮ ಪವಿತ್ರನಂಟು, ಈ ಗೆಳೆತನ!ನಕ್ಕಾಗ ಅತ್ತಾಗ ಜೊತೆಯಲ್ಲೂ ನೀನೆನಗುವಿರದ ನೋವಿನ ನೆರಳಲ್ಲೂ ನೀನೆ,ಏಳು ಸಂವತ್ಸರದ ನಮ್ಮೀನಂಟುಏಳುಬೀಳುಗಳನ್ನು ಜಾರಿಸುವುದುಂಟು,ನಮ್ಮ ಪವಿತ್ರನಂಟು, ಈ ಗೆಳೆತನ!