ಪಾರಂಪರಿಕ ಕಟ್ಟಡಗಳು: ನಮ್ಮಗುರುತಿನ ಜೀವಂತ ಸಾಕ್ಷಿಗಳು
“ಪಾರಂಪರಿಕ ಕಟ್ಟಡಗಳು ಕೇವಲ ಕಲ್ಲಿನಿಂದ ನಿರ್ಮಾಣವಾಗುವುದಿಲ್ಲ — ಅವು ಸಂಸ್ಕೃತಿಯ ನೆನಪುಗಳಿಂದ ಕಟ್ಟಲ್ಪಟ್ಟ ಇತಿಹಾಸದ ಹೃದಯಗಳು.” ನಮ್ಮ ದೇಶದ ಪಾರಂಪರಿಕ ಕಟ್ಟಡಗಳು ಇತಿಹಾಸದ ಜೀವಂತ ಸಾಕ್ಷಿಗಳು. ಅವು ಹಿಂದಿನ ಪೀಳಿಗೆಯ ಕಲಾ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹಿಮೆಗಳನ್ನು ಹೊತ್ತಿವೆ. ಪ್ರತಿ ಕಟ್ಟಡವೂ ಒಂದು ಕಥೆಯನ್ನು ಹೇಳುತ್ತದೆ — ಅದರ ಗೋಡೆಗಳಲ್ಲಿ ಕಾಲದ ಉಸಿರಾಟ ಕೇಳುತ್ತದೆ. ಅಂದಿನ ಕಾಲದಲ್ಲಿ ನಿರ್ಮಿಸಲ್ಪಟ್ಟ ಆಸ್ಪತ್ರೆಗಳು, ಆಡಳಿತ ಕಟ್ಟಡಗಳು, ಅರಮನೆಗಳು, ಬಂಗಲೆಗಳು, ದೇವಸ್ಥಾನಗಳು — ಇವೆಲ್ಲವೂ ನಮ್ಮ ಪಾರಂಪರೆಯ ನಿಜವಾದ […]
