ಮಕರ ಸಂಕ್ರಾತಿ-ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ
ಸನಾತನ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾತಿಯು ಪ್ರಮುಖವಾದುದು ಹಾಗೂ ವಿಶೇಷವಾದುದು. ಸೂರ್ಯ ಸಿದ್ದಾಂತದ ಆಧಾರದ ಮೇಲೆ ಸಿದ್ದವಾಗಿರುವ ಪಂಚಾಂಗಗಳು ಮಕರ ಸಂಕ್ರಾಂತಿಯ ದಿನಗಳನ್ನು ನಿರ್ಧರಿಸುತ್ತವೆ. ಮಕರ ಸಂಕ್ರಾಂತಿಯ ಹಬ್ಬದ ಆಚರಣೆಗೂ ಮೊದಲು ಸಂಕ್ರಮಣ ಎಂದರೇನು , ಅದರ ಫಲವೇನು, ಸಂಕ್ರಮಣ ಕಾಲ ಯಾವುದು, ಎಷ್ಟು ಸಂಕ್ರಮಣಗಳಿವೆ ಎಂದು ತಿಳಿಯಬೇಕು.ಸಂಕ್ರಮಣ ಕಾಲವನ್ನು ಹೇಗೆ ನಿರ್ಧರಿಸಬೇಕು? ಎಂದು ಧರ್ಮಸಿಂಧು, ನಿರ್ಣಯ ಸಿಂಧು , ಧರ್ಮಶಾಸ್ತ್ರ ಕರದೀಪಿಕಾ ಎಂಬಿತ್ಯಾದಿ ಗ್ರಂಥಗಳು ನಮಗೆ ತಿಳಿಸಿವೆ. ಈ ಗ್ರಂಥಗಳಲ್ಲಿ ನೀಡಿರುವ ವಿಷಯಗಳ […]