“ಸಾಧನೆಯ ರಥ ಸೃಷ್ಟಿಸಿಯೇ ಬಿಟ್ಟಿತು ಸಂಚಲನದ ಪಥ”
“ಶಕ್ತನಾದರೆ ನೆಂಟರೆಲ್ಲ ಹಿತರು ಅಶಕ್ತನಾದರೆ ಆಪ್ತ ಜನರೇ ವೈರಿಗಳು” – ಪುರಂದರದಾಸರ ಈ ಅಮೃತವಾಣಿಯಂತೆ ನಮ್ಮಲ್ಲಿರುವ ಅಸಾಧಾರಣ ಪ್ರತಿಭೆಯು ದೈವದತ್ತ ಕೊಡುಗೆ. ಇದನ್ನು ಓರೆಗಚ್ಚಿದಾಗ ಮಾತ್ರ ಶ್ರೀಗಂಧದ ಕೊರಡನ್ನು ಕಲ್ಲಿನ ಮೇಲೆ ತೇದಾಗ ಬರುವ ಸುಗಂಧದಂತೆ ಆ ಪರಿಸರದಲ್ಲಿರುವ ಸಕಲ ಜೀವರಾಶಿಗಳ ಜ್ಞಾನೇಂದ್ರಿಯವನ್ನು ಪ್ರಚೋದಿಸುವಂತಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿದಾಗ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಾರೆ. ಮಗುವಿನ ಕಲಿಕೆಗೆ ಮನೆ, ಶಾಲೆ, ಸ್ನೇಹಬಳಗ ಹಾಗೂ ತನ್ನ ಸುತ್ತಲ ಪರಿಸರವು ತುಂಬಾ ಸಹಕರಿಸುತ್ತಿರುತ್ತವೆ. ಆದರೆ ತಾನು ಏನನ್ನು ಕಲಿಯುತ್ತಿರುತ್ತೇನೆ ಎಂಬ […]
