ಮೌನ ವೇದನೆ

ಮನೆಯಿಂದ ಹೊರಗೆ ಹಾಕಿದರೆ,
ಎಲ್ಲಿ ಹೋಗಲಿ ನಾನು?
ಮರಳಿ ಕರೆದರೆ,
ಹೇಗೆ ಮರೆಯಲಿ ಹೊರಗೆ ಹಾಕಿದ ನೋವನ್ನು?
ತಪ್ಪು ಮಾಡದ ಜೀವ,
ಹೇಗೆ ತಡೆಯುವುದು ಈ ನೋವ?
ಆಳ ಅರಿಯದೆ ಕಡಲಿಗೆ ದುಮುಕಿದೆ,
ಈಜು ಬರದೆ ಜೀವ ಬದುಕಿದೆ.
ಬಿರುಗಾಳಿಗೆ ಅಲುಗದೆ, ಮುಳುಗದೆ
ಧೈರ್ಯದೀ ಬದುಕುವೆ.
ಕೊಡು ನನಗೆ ತಾಳ್ಮೆ, ದೇವ;
ಸುನಾಮಿ ಎದುರಾದರೂ,
ಎದುರಿಸುವ ಮನವ.
