ಸಾಧನಾ
ಸಾಧನೆಗೆ ಬೇಕಾಗಿರುವುದು ಛಲ ಮನಸ್ಸು ಎಂದಿಗೂ ಆಗಬಾರದು ಚಂಚಲ.!! ಪ್ರಯತ್ನ ಮಾಡಿದರೆ ಸಿಗುವುದು ಫಲಈ ಗೀತೆಯನ್ನು ಓದಿ ನೋಡಿ ಒಂದು ಸಲ.!! ಸಾಧನೆ ಎಂಬುದು ಎಲ್ಲರ ಕನಸು. ಮಾಡಬೇಕು ಅದನ್ನು ನನಸು ಅದಕ್ಕೆ ಬೇಕಾಗಿರುವುದು ದೃಢ ಮನಸ್ಸು. ಸಂಕಲ್ಪ ಮಾಡಿದರೆ ಸಿಗುವುದು ಯಶಸ್ಸು.!! ನನ್ನ ಭಾಷೆ ಮಾತನಾಡಲು ಬಲು ಅಂದ. ನಾನು ಕನ್ನಡದ ಕಂದ ನಾನು ಬೇರೆ ಭಾಷೆಯಲ್ಲಿ ಮಂದ ನನ್ನ ಭಾಷೆ ಮಾತನಾಡಿದರೆ ಅದುವೇ ಆನಂದ.!! ಎಂದಿಗೂ ನಾ ನೋಡುವುದಿಲ್ಲ ಹಿಂದೆ ಒಂದು ಸಲ ನಡೆದರೆ ನಾ ಮುಂದೆ ನನ್ನ ಸಾಧನೆಗೆ ಕೈಜೋಡಿಸಿದರು ಅಂದೆ, ನನ್ನ ಯಶಸ್ಸಿಗೆ ಕಾರಣವೇ ನನ್ನ ತಾಯಿ ತಂದೆ!!
