Puneeth G
Posts by Puneeth G :
ಶ್ರೀ ವರಮಹಾಲಕ್ಷ್ಮೀ ವ್ರತ
ಭಾರತದಲ್ಲಿ ಇತ್ತೀಚಿಗೆ ಆಚರಿಸುತ್ತಿರುವ ಅತಿ ದೊಡ್ಡ ಹಬ್ಬವೆಂದರೆ ಅದು ವರಮಹಾಲಕ್ಷ್ಮೀ ಹಬ್ಬ. ಗೌರೀ ಗಣೇಶ ಹಬ್ಬವೇ ಅತಿ ದೊಡ್ಡ ಹಬ್ಬ ಎಂದು ಹೇಳಲಾಗಿತ್ತು ಅದು ಸರಿ ಆದರೆ ಗೌರೀ ಗಣೇಶನನ್ನು ಕೆಲವರು ಮನೆಯಲ್ಲಿ ಕೂರಿಸಿ ಪೂಜಿಸುವುದಿಲ್ಲ ಅದೊಂದು ಸಾರ್ವಜನಿಕ ಹಬ್ಬದಂತೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಆದರೆ ವರಮಹಾಲಕ್ಷ್ಮೀ ಹಾಗಲ್ಲ ಒಂದಷ್ಟು ವರ್ಷಗಳ ತನಕ ವ್ರತವಾಗಿ ಕೇವಲ ಸಂಪ್ರದಾಯವಾಗಿ ಆಚರಿಸುವವರ ಮನೆಯಲ್ಲಿ ವ್ರತಾಚರಣೆಯಾಗಿದ್ದ ವರಮಹಾಲಕ್ಷ್ಮೀ ವ್ರತ ಇಂದು ವರಮಹಾಲಕ್ಷ್ಮೀ ಹಬ್ಬವಾಗಿ ಪರಿವರ್ತನೆಗೊಂಡು ಪ್ರತಿ ಮನೆಯಲ್ಲೂ ಲಕ್ಷ್ಮೀಯನ್ನು ವಿಶೇಷವಾಗಿ […]
ಕನ್ನಡ ಕವನ ತಂದ ಹರ್ಷ
ಕಛೇರಿಯ ಕೆಲಸ ಮುಗಿಸಿ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಮನೆಯಾಕೆಯಿಂದ ರಾತ್ರಿ 07:30 ಕ್ಕೆ ಒಂದು ದೂರವಾಣಿ ಕರೆ ನಿಮಗೊಂದು ವಾಟ್ಸಪ್ ಮಾಡಿದ್ದೇನೆ ನೋಡಿ ಎಂಬ ಸಂದೇಶ! ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಮಗನಿಗೆ ಅವರ ಕನ್ನಡ ಶಿಕ್ಷಕರು ಕನ್ನಡದ ಬಗ್ಗೆ ಅದರ ಹೆಮ್ಮೆ, ಭಾಷೆಯ ಮಹತ್ವ, ಕನ್ನಡವನ್ನು ಏಕೆ ಬಳಸಬೇಕು? ಎಂಬುದರ ಕುರಿತು ಒಂದೆರಡು ಪ್ಯಾರದಲ್ಲಿ ಪದ್ಯ ಅಥವಾ ಕವನ ರಚನೆ ಮಾಡಬೇಕು ಎಂಬುದು ಅಂದಿನ ಕನ್ನಡ ಪಠ್ಯದ ಮನೆಗೆಲಸ. ಮನೆಯವಳಿಗೆ ಆತಂಕ ಈ ಮಗುವಿನ ಕೈಯಲ್ಲಿ ಕನ್ನಡದ […]
ಮಕರ ಸಂಕ್ರಾತಿ-ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ
ಸನಾತನ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾತಿಯು ಪ್ರಮುಖವಾದುದು ಹಾಗೂ ವಿಶೇಷವಾದುದು. ಸೂರ್ಯ ಸಿದ್ದಾಂತದ ಆಧಾರದ ಮೇಲೆ ಸಿದ್ದವಾಗಿರುವ ಪಂಚಾಂಗಗಳು ಮಕರ ಸಂಕ್ರಾಂತಿಯ ದಿನಗಳನ್ನು ನಿರ್ಧರಿಸುತ್ತವೆ. ಮಕರ ಸಂಕ್ರಾಂತಿಯ ಹಬ್ಬದ ಆಚರಣೆಗೂ ಮೊದಲು ಸಂಕ್ರಮಣ ಎಂದರೇನು , ಅದರ ಫಲವೇನು, ಸಂಕ್ರಮಣ ಕಾಲ ಯಾವುದು, ಎಷ್ಟು ಸಂಕ್ರಮಣಗಳಿವೆ ಎಂದು ತಿಳಿಯಬೇಕು.ಸಂಕ್ರಮಣ ಕಾಲವನ್ನು ಹೇಗೆ ನಿರ್ಧರಿಸಬೇಕು? ಎಂದು ಧರ್ಮಸಿಂಧು, ನಿರ್ಣಯ ಸಿಂಧು , ಧರ್ಮಶಾಸ್ತ್ರ ಕರದೀಪಿಕಾ ಎಂಬಿತ್ಯಾದಿ ಗ್ರಂಥಗಳು ನಮಗೆ ತಿಳಿಸಿವೆ. ಈ ಗ್ರಂಥಗಳಲ್ಲಿ ನೀಡಿರುವ ವಿಷಯಗಳ […]
ಕ್ಯಾಲೆಂಡರ್ ಹಿಂದಿನ ಗುಟ್ಟು – ಹೊಸ ವರ್ಷದ ಆಚರಣೆ ಹೇಗೆ ಆರಂಭವಾಯಿತು ?
ಕ್ಯಾಲೆಂಡರ್ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ರತಿಯೊಬ್ಬರು ಈ ಕ್ಯಾಲೆಂಡರ್ ನ ಮೇಲೆ ಅವಲಂಬಿತರೆ. ಅದು ಯಾವುದೇ ಕಾರ್ಯಕ್ರಮದ ನಿಗದಿ ಇರಬಹುದು, ಪರೀಕ್ಷೆಯ ವಿಷಯವಿರಬಹುದು, ಪ್ರಯಾಣ ವಿರಬಹುದು, ಹುಟ್ಟು-ಸಾವುಗಳ ದಿನಾಂಕದ ಗುರುತಿರಬಹುದು, ಶುಭ ಕಾರ್ಯಗಳ ನಿಗದಿ, ರೈತರು ಬೆಳೆ ಬೆಳೆಯಲು, ಮಳೆ-ಗಾಳಿ, ಬೇಸಿಗೆ -ಚಳಿ ಹೀಗೆ ಯಾವುದೇ ವಿಷಯ ತೆಗೆದುಕೊಂಡರು ಅಲ್ಲಿ ಎಲ್ಲಾ ವಿಷಯಗಳ ಜೊತೆಗೆ ಪ್ರಮುಖವಾಗಿ ಬರುವುದು ಒಂದು ದಿನಾಂಕ, ತಿಂಗಳು, ವಾರ, ವರ್ಷ ಒಟ್ಟಾರೆ ಅಲ್ಲಿ ಒಂದು ಕ್ಯಾಲೆಂಡರ್.
