Primary fields
mahadevaswamy@purnachetana.org | |
First name | Mahadevaswamy |
Description | ಕನ್ನಡ ಭಾಷಾ ಶಿಕ್ಷಕರು, ಪೂರ್ಣಚೇತನ ಪಬ್ಲಿಕ್ ಶಾಲೆ, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ಮಹದೇವಪ್ಪ ಮತ್ತು ಶಾಂತಮ್ಮ ಎಂಬ ಶ್ರಮಜೀವಿ ರೈತ ದಂಪತಿಗಳ ಪುತ್ರನಾದ ಇವರು, ಎಂ.ಎ. ಮತ್ತು ಎಂ.ಎಡ್. ಪದವೀಧರರಾಗಿದ್ದು, ಪ್ರಸ್ತುತ ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿಮಾನಿ ಆದ ಇವರು, ತಮ್ಮ ಬೋಧನೆ ಮೂಲಕ ಭಾಷೆಯ ವೈಭವವನ್ನು ವಿದ್ಯಾರ್ಥಿಗಳಲ್ಲಿ ಚಿಗುರಿಸಿ, ಒಂದು ಹೊಸ ಆಯಾಮವನ್ನು ನೀಡುತ್ತಿದ್ದಾರೆ. ಸದಾ ಹಸನ್ಮುಖಿ ಹಾಗೂ ಸೌಮ್ಯ ಸ್ವಭಾವವನ್ನು ಹೊಂದಿರುವ ಇವರು, ಮಕ್ಕಳ ಮೆಚ್ಚುಗೆಯ ಶಿಕ್ಷಕರಾಗಿ, ಕನ್ನಡ ನಾಡು-ನುಡಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. |