ನಮ್ಮ ಕನ್ನಡ
ನನ್ನ ಕನ್ನಡ, ನಿನ್ನ ಕನ್ನಡ, ನಮ್ಮ ಕನ್ನಡ !
ಅಮ್ಮ ಎಂದು ಮೊದಲು ನಾ ಹೇಳಿದ್ದು ಕನ್ನಡ!
ಅಮ್ಮ ಮೊದಲು ಕಲಿಸಿದ್ದು ಕನ್ನಡ !
ಓದಿದ್ದು ಕನ್ನಡ, ಬರೆದಿದ್ದು ಕನ್ನಡ, ನುಡಿಯೋದು ಕನ್ನಡ!
ಹಾಡಿದ್ದು ಕನ್ನಡ, ಆಡಿದ್ದು ಕನ್ನಡ !
ಕನ್ನಡ ಬಳೆಸಲು ಹಿಂಜರಿಯ ಬೇಡ, !
ಹೆಮ್ಮೆ ಇಂದ ಹೇಳು ನನ್ನ ಭಾಷೆ ಕನ್ನಡ !
ನನ್ನ ಕನ್ನಡ ನಿನ್ನ ಕನ್ನಡ ನಮ್ಮ ಕನ್ನಡ ||೧||
ಕನ್ನಡ ಕೊಟ್ಟಿದೆ ಪಂಪ, ರನ್ನ, ಕುವೆಂಪು, ಮಾಸ್ತಿಯಂತ ಆಸ್ತಿಯನ್ನ!
ಕನ್ನಡ ಕೊಟ್ಟಿದೆ ಶಂಕರ ,ರಾಮಾನುಜ, ಮಾದ್ಧ್ವ ,ಬಸವಣ್ಣರೆಂಬ
ಧರ್ಮದ ಆಧಾರ ಸ್ತಂಭಗಳನ್ನ!
ಕನ್ನಡ ಕೊಟ್ಟಿದೆ ಕನಕರ, ಪುರಂದರ ದಾಸ, ಸಾಹಿತ್ಯವನ್ನ!
ಕನ್ನಡ ಕೊಟ್ಟಿದೆ ಕಗ್ಗವೆಂಬ ಜೀವನದ ಸಗ್ವವನ್ನ!
ದಾಸರ ಪದಗಳ ಜೊತೆಗೆ ವಚನಗಳ ಜ್ಞಾನವನ್ನ!
ಒಮ್ಮೆ ಯೋಚಿಸು ಕನ್ನಡ ಬಿಟ್ಟಿದೆ ಏನನ್ನ
ಕನ್ನಡ ಬಳಸಲು ಹಿಂಜರಿಯಬೇಡಣ್ಣ!
ದಾಸರ ಪದಗಳ ಜೊತೆಗೆ ವಚನಗಳ ಜ್ಞಾನವನ್ನ!
ನನ್ನ ಕನ್ನಡ, ನಿನ್ನ ಕನ್ನಡ ,ನಮ್ಮ ಕನ್ನಡ||೨||
ಕನ್ನಡದ ನೆಲ ನೀಡುತ್ತಿದೆ ಜಗತ್ತಿಗೆ ಜ್ಞಾನ ,ವಿಜ್ಞಾನ, ತಂತ್ರಜ್ಞಾನ !
ಕನ್ನಡ ಶೂನ್ಯ ಎಂದು ತಿಳಿದರೆ ಅದು ನಮ್ಮ ಅಜ್ಞಾನ!
ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಹಾದಿ ಸಾಗಿ ಬಂದ ನಮ್ಮ ಕನ್ನಡ !
ಶಿಕ್ಷಣದ ಸಿದ್ದಗಂಗೆ ಹರಿಸಿ, ಸಾಂಸ್ಕೃತಿಕ ವೈಭವದ ಸಹ್ಯಾದ್ರಿ ಹೊತ್ತು ನಿಂತ ನಮ್ಮ ಕನ್ನಡ !
ಹಿಂಜರಿಯ ಬೇಡ , ಹೆದರ ಬೇಡ ,ನೀ ಮುಗಿಲೆತ್ತರಕ್ಕೆ ಹಳದಿ ಕೆಂಪು ಏರಿಸಿ ಹೇಳು
ನನ್ನ ಭಾಷೆ ಕನ್ನಡ, ನಿನ್ನ ಭಾಷೆ ಕನ್ನಡ. ನಮ್ಮ ಭಾಷೆ ಕನ್ನಡ||೩||