ನನ್ನ ಶಾಲೆ

4.5
(2)

ನನ್ನ ಶಾಲೆಯ ಪರಿಸರ ತುಂಬಾ ಸುಂದರ

ಏಕೆಂದರೆ ಇಲ್ಲಿವೆ ತುಂಬಾ ಗಿಡಮರ!!

 

ಅಶೋಕ ಮಾವು ತೆಂಗು ಕಂಗಿನ ಮರಗಳು ಇಲ್ಲಿವೆ

ಇಡೀ ಶಾಲೆಯಲ್ಲಿ ಹಚ್ಚ ಹಸಿರನ್ನು ಮೂಡಿಸಿವೆ !!

 

ನಾನು  ಗೌರವಿಸುವೆ  ನನ್ನ ಎಲ್ಲಾ ಗುರು ವೃಂದವನ್ನು

ಅವರು ಮೂಡಿಸಿದ್ದಾರೆ ವಿದ್ಯೆಯೆಂಬ  ಕಾಮನಬಿಲ್ಲನ್ನು!!

ನಮ್ಮ ಶಾಲೆಯ ಮೇಲೆ ಹಾರಾಡುತ್ತವೆ ತುಂಬಾ ವಿಮಾನಗಳು

ಇವುಗಳನ್ನು ನೋಡಿದ ಕ್ಷಣ ನನಗೂ ಅನಿಸುತ್ತದೆ ಹಾರಾಡಲು !!

 

ಇಲ್ಲಿ ನಾವು ವಿಧವಿಧವಾದ ತರಕಾರಿಗಳನ್ನು ಬೆಳೆಯುತ್ತೇವೆ

ಕೊನೆಗೆ ಮನೆಗೆ ತೆಗೆದುಕೊಂಡು ಹೋಗಿ ಸಂತೋಷದಿಂದ ತಿನ್ನುತ್ತೇವೆ. !!

 

ನನ್ನ ಶಾಲೆ ನನ್ನ ಹೆಮ್ಮೆಯ ಶಾಲೆ

ನನ್ನ ಶಾಲೆ ಒಂದು ವೈಶಿಷ್ಟ್ಯ ಬಗೆಯ ಶಾಲೆ!!

Average rating 4.5 / 5. Vote count: 2

No votes so far! Be the first to rate this post.