ಸ್ಫಟಿಕದಂಥ ಭಾಷೆ ಕನ್ನಡ
ಕನ್ನಡ ನಾಡಲ್ಲಿ ಬೆಳೆದು,
ಕಾವೇರಿ ನೀರನ್ನು ಕುಡಿದು,
ಕನ್ನಡ ತಾಯಿಯ ಉಸಿರಲ್ಲಿ ಬೆರೆತು,
ಕನ್ನಡವ ಬೆಳೆಸೋಣ, ಉಳಿಸೋಣ ಒಂದಾಗಿ ನಿಂತು.

ಏನೂ ಇಲ್ಲ ಕನ್ನಡದಲ್ಲಿ ಮುಚ್ಚುಮರೆ,
ಸ್ಫಟಿಕದಂತೆ ಹೊಳೆಯುವ ನುಡಿಯ ಸೊಬಗೇ ಬೇರೆ;
ಸರಳ ಸುಂದರ ಕನ್ನಡದ ನುಡಿ,
ಕೇಳಿದರೆ ಮನಸಿಗೆ ಆನಂದದ ಗುಡಿ.
ಕನ್ನಡವೇ ಅಂದ, ಕನ್ನಡವೇ ಚಂದ,
ನಾನು ಕನ್ನಡದ ಕಂದ,
ಕನ್ನಡ ನುಡಿಯೇ ನನಗಾನಂದ.

ಓದಿ ನೋಡಿ ನನ್ನ ಪದ್ಯ,
ಕನ್ನಡಕ್ಕೆ ಇಲ್ಲ ಎಂದಿಗೂ ಅಂತ್ಯ;
ಕನ್ನಡವೇ ಸತ್ಯ,
ಕನ್ನಡವೇ ನಿತ್ಯ.
