ಆರ್ಸಿಬಿಯ ಹೊಸ ಅಧ್ಯಾಯ🏆

17 ಸಂವತ್ಸರಗಳ ಆರ್ಸಿಬಿಯ ವನವಾಸ,
ಇಂದು ಕಳೆದು ಮೂಡಿದೆ ಮುಖದಲ್ಲಿ ಮಂದಹಾಸ.
18ನೇ ಸಂಖ್ಯೆಯ 18ನೇ ಸಂವತ್ಸರದಲ್ಲಿ,
ಕಪ್ನ್ನು ಜಯಿಸಿದ ಆ ಕ್ಷಣ ಆನಂದದ ಭಾಷ್ಪದಲ್ಲಿ.
ಪುಟಾಣಿಯಿಂದ ಮುದುಕರವರೆಗಿನವರೆಲ್ಲರೂ ಹುರುಪಿನಲ್ಲಿ,
ಸಂಭ್ರಮದ ಅಲೆಯಲ್ಲಿ ತೇಲಿದರು ಹರ್ಷೋದ್ಗಾರದಲ್ಲಿ!
ಮೊದಲಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಮಹಿಳೆಯರು,
ನಂತರ ಪುರುಷರೂ ಎಲ್ಲ ತಂಡಗಳನ್ನು ಮೆಟ್ಟಿ ನಿಂತರು.
“ಆರ್ಸಿಬಿಯ ಹೊಸ ಅಧ್ಯಾಯ ಇಲ್ಲಿಂದಲೇ ಶುರುವಾಯಿತು“
ಎಂದು ಹೆಮ್ಮೆಯಿಂದ ಎಲ್ಲರೂ ಸಾರಿದರು.
Andy Flower ರ ಆ ಚಮತ್ಕಾರ,
ಎಲ್ಲಾ ಎದುರಾಳಿ ತಂಡಗಳಿಗೂ ಆಯಿತು ಆಹಾಕಾರ.
Dinesh Karthik ರ ಆ ಶಿಸ್ತು,
ಎಲ್ಲಾ ಕೋಚ್ಗಳಿಗೂ ಆಯಿತು ಸುಸ್ತು.
Rajat ಹಾಗೂ Suyash ರ ಈ ಹೋರಾಟ,
ತಂದಿತು ಸತತ ಗೆಲುವಿನ ಹಾರಾಟ.
Virat Kohli ಯ ಅಚಲ ವಿಶ್ವಾಸ,
ಕೊನೆಗೂ ಈಡೇರಿತು ಅಭಿಮಾನಿಗಳ ಕನಸಿನ ಉಸಿರಾಟ.
Phil Salt ನ ಸಿಡಿಲಿನ ಬ್ಯಾಟಿಂಗ್,
ಎದುರಾಳಿಗಳಿಗೆ ನೀಡಿತು ಸೋಲಿನ ವೆಲ್ಕಮ್ ಮೀಟಿಂಗ್.
Josh Hazlewood ನ ಬೆಂಕಿಯ ಬೌಲಿಂಗ್,
ಬ್ಯಾಟ್ಸ್ಮನ್ಗಳಿಗೆ ಆಯಿತು ಕಠಿಣ ಫೀಲಿಂಗ್.
ಕೆಂಪು–ಕಪ್ಪಿನ ಧ್ವಜ ಹಾರಿತು ಗಗನದ ಎತ್ತರದಲ್ಲಿ,
“ಈ ಸಲ ಕಪ್ ನಮ್ದೇ!” ಮೊಳಗಿತು ಕೋಟ್ಯಾಂತರ ಕಂಠದಲ್ಲಿ.
ಇದು ಕೇವಲ ಟ್ರೋಫಿಯ ಗೆಲುವಲ್ಲ,
ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯ ಫಲ.
ಹೊಸ ಅಧ್ಯಾಯ ಈಗ ಆರಂಭವಾಗಿದೆ,
ಆರ್ಸಿಬಿಯ ಕನಸು ಕೊನೆಗೂ ನನಸಾಗಿದೆ! 🏆
