ಕನ್ನಡ ವೀರರು
ಕನ್ನಡ ನಾಡಿನ ವೀರರ ಕಥೆ
ಅವರಿಂದ ಸಿಗಲಿಲ್ಲ ನಮಗೆ ವ್ಯಥೆ.
ನಮ್ಮ ಕನ್ನಡದ ವೀರರ ಸಿರಿ
ಬೆಳೆಯಿತು ಕನ್ನಡವು ಚಿಗುರಿ
ಅವರು ನಡೆದ ದಾರಿ
ನಮಗೆ ಆಯಿತು ಮಾದರಿ
ಕರ್ನಾಟಕದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ.
ನಾವು ಕನ್ನಡದ ವೀರರಮುಂದೆ ಶೂನ್ಯ.
ಕನ್ನಡಕ್ಕಾಗಿ ಅವರು ಪಟ್ಟರು ನೋವ
ಅವರ ಪಾದಕ್ಕೆ ಅರ್ಪಿಸಬೇಕು ಹೂವ.
ನೀವೇ ನಮಗೆ ದೇವರು
ನಾವು ಸದಾ ನಿಮ್ಮ ಸೇವಕರು.
ನಾನು ಕನ್ನಡಕ್ಕೆ ಸೇವಕ
ನಾನಾಗುತ್ತೇನೆ ಕನ್ನಡದ ಸಾಧಕ
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
