CREATIVE EXPRESSION
ನನ್ನ ಶಾಲೆ
ನನ್ನ ಶಾಲೆಯ ಪರಿಸರ ತುಂಬಾ ಸುಂದರಏಕೆಂದರೆ ಇಲ್ಲಿವೆ ತುಂಬಾ ಗಿಡಮರ!! ಅಶೋಕ ಮಾವು ತೆಂಗು ಕಂಗಿನ ಮರಗಳು ಇಲ್ಲಿವೆಇಡೀ ಶಾಲೆಯಲ್ಲಿ ಹಚ್ಚ ಹಸಿರನ್ನು ಮೂಡಿಸಿವೆ !! ನಾನು ಗೌರವಿಸುವೆ ನನ್ನ ಎಲ್ಲಾ ಗುರು ವೃಂದವನ್ನುಅವರು ಮೂಡಿಸಿದ್ದಾರೆ ವಿದ್ಯೆಯೆಂಬ ಕಾಮನಬಿಲ್ಲನ್ನು!!ನಮ್ಮ ಶಾಲೆಯ ಮೇಲೆ ಹಾರಾಡುತ್ತವೆ ತುಂಬಾ ವಿಮಾನಗಳುಇವುಗಳನ್ನು ನೋಡಿದ ಕ್ಷಣ ನನಗೂ ಅನಿಸುತ್ತದೆ ಹಾರಾಡಲು !! ಇಲ್ಲಿ ನಾವು ವಿಧವಿಧವಾದ ತರಕಾರಿಗಳನ್ನು ಬೆಳೆಯುತ್ತೇವೆಕೊನೆಗೆ ಮನೆಗೆ ತೆಗೆದುಕೊಂಡು ಹೋಗಿ ಸಂತೋಷದಿಂದ ತಿನ್ನುತ್ತೇವೆ. !! ನನ್ನ ಶಾಲೆ ನನ್ನ ಹೆಮ್ಮೆಯ ಶಾಲೆನನ್ನ ಶಾಲೆ ಒಂದು ವೈಶಿಷ್ಟ್ಯ ಬಗೆಯ […]
ಸೊಬಗಿನ ಪರಿಸರ
ಈ ಪರಿಸರ ಬಹು ಸುಂದರ ಈ ಜಗದ ಅಂದದ ಆಗರ ! ಇಲ್ಲಿ ತುಂಬ ಗಿಡ ಮರ ಹೂವು ನಾನ ತರ ತರ ಹಣ್ಣು ಹಂಪಲ ಮಧುರ ಫಲ ಅನುಭವಿಸಿದರೆ ನಾವು ಸಫಲ ! ಪ್ರಾಣಿ ಪಕ್ಷಿ ಗಿಡ ಮರ ಎಲ್ಲ ಸೇರಿ ಪರಿಸರ ಅಗ್ನಿವಾಯು ಭೂಮಿ ಜಲ ಮುಗಿಲು ಬಹು ಹಿತಕರ ಈ ಪರಿಸರ ಬಹು ಸುಂದರ ಈ ಜಗದ ಅಂದದ ಆಗರ
ಪರಿಸರ ಉಳಿಸಿ
ನಾವು ಮಕ್ಕಳು ಮುಂದಿನ ಪ್ರಜೆಗಳು ನಮಗೊಂದಿಷ್ಟು ಉಳಿಸಿ ! ನಿರ್ಮಲ ಗಾಳಿ ನೀರು ಬೆಳಕು ಇಷ್ಟಾದರೂ ನಮಗ್ ಉಳಿಸಿ! ಬುದ್ಧಿ ಹೇಳುವ ದೊಡ್ಡವರೇ ನೀವು ಪರಿಸರವನ್ನೇಕೆ ಕೊಲ್ಲುವಿರಿ. ಬೆಳೆಯಬೇಡವೇ ನಿಮ್ಮ ಮಕ್ಕಳು ಶುದ್ಧ ವಾತಾವರಣದಲಿ?
