ಸಾಧನೆಯ ದಾರಿ

ಇರಲು ಬೇಕಾಗಿರುವುದು ನೆಲ,
ಕಾದರೆ ಸಿಗುವುದು ಸಿಹಿಯಾದ ಫಲ.
ಕಷ್ಟಪಟ್ಟರೆ ಸಿಗುವುದು ಬಲ,
ಸಾಧನೆಗೆ ಬೇಕಿಲ್ಲ ಯಾವುದೇ ಕಾಲ.
ಆತುರವೇ ಅಪಘಾತಕ್ಕೆ ಕಾರಣ,
ಆತುರದಿಂದ ಬರಬಾರದು ಮರಣ.
ಅಪಘಾತವಾಗದಂತೆ ಇರಲು ಎಚ್ಚರ,
ದೇವರ ಚರಣವ ನೆನೆಯೋಣ ನಿರಂತರ.
ನಮ್ಮ ಆರೋಗ್ಯಕ್ಕೆ ಬೇಕು ಬೆಳಕಿನ ಹೊಂಗಿರಣ.
ಓದಿ ನನ್ನ ಪದ್ಯವನ್ನು ಕಾತುರವಾಗಿ,
ಓದಬೇಡಿ ನನ್ನ ಪದ್ಯವನ್ನು ಆತುರವಾಗಿ!
ಇರಬೇಕು ಜೀವನದಲ್ಲಿ ಚಾತುರ್ಯವಾಗಿ,
ಮುನ್ನಡೆಯಬೇಕು ಸದಾ ಧೈರ್ಯವಾಗಿ.
ನಮ್ಮನ್ನು ನಿಂದಿಸುವವರ ಮುಂದೆ
ತಲೆಬಾಗದೆ ನಿಲ್ಲೋಣ ಸ್ವಾಭಿಮಾನವಾಗಿ,
ಕಷ್ಟಗಳನ್ನೆಲ್ಲ ಎದುರಿಸುತ್ತಾ
ಸಾಧನೆಯತ್ತ ಸಾಗೋಣ ಹೆಮ್ಮೆಯಾಗಿ!
