ದುಡಿಮೆಯ ದಾರಿ

ಮನವಿಟ್ಟು ದುಡಿಯುವೆನು ದಿನವು ನಾನು,
ದೊರಕುವುದು ಅದರಿಂದ ಮನಕೆ ಸ್ಫೂರ್ತಿ.
ಕಾಣುವೆನು ಕೈಲಾಸ ದಿನದ ಕಾಯಕದಿಂದ,
ಪಡೆಯುವೆನು ಉಲ್ಲಾಸ ದಿನದ ಕೊನೆಗೆ;
ದುಡಿವ ಮನಕೆ ಬೇಕೆ ಇದಕಿಂತ ಬಹುಮಾನ?
ಎಲ್ಲರನ್ನೂ ಮೆಚ್ಚಿಸಲು ನಾನು ದುಡಿಯುವುದಿಲ್ಲ;
ದುಡಿಯುವುದು ಅನಿವಾರ್ಯ ದಿನದ ಕೂಳಿಗೆ.
ಮೆಚ್ಚುವವರಿಲ್ಲವೆಂದು ಚಿಂತಿಸೆನು ನಾನೆಂದು.
ದುಡಿಯುವೆನು ಮನವಿಟ್ಟು ಎಂದಿನಂತೆ;
ಯಾರು ತೆಗಳಿದರೂ ಎನಗಿಲ್ಲ ಚಿಂತೆ.
