ಕೃಷಿಯಲ್ಲಿ ಮಹಿಳೆಯರ ಪಾತ್ರ
ಭಾರತ ಒಂದು ಕೃಷಿ ಪ್ರಧಾನ ದೇಶವಾಗಿದ್ದು, ಗ್ರಾಮೀಣ ಜೀವನದ ಕೇಂದ್ರಬಿಂದು ಕೃಷಿಯಾಗಿದೆ. ಈ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದರೂ, ಅವಳನ್ನು “ಸಹಾಯಕಿ“ಯಾಗಿ ಮಾತ್ರ ನೋಡಲಾಗುವುದು. “ರೈತ” ಎಂದು ಗುರುತಿಸುವುದು ಕಡಿಮೆ.

ಮಹಿಳೆಯರ ದಿನನಿತ್ಯದ ಕೃಷಿ
ಬೀಜದ ಆಯ್ಕೆ, ಮಣ್ಣಿನ ತಯಾರಿ, ಬಿತ್ತನೆ. ನಾಟಿ, ನೀರಾವರಿ, ಕಳೆ ತೆಗೆಯುವುದು, ಕೊಯ್ದು, ಉಣಬಡಿಕೆ, ಧಾನ್ಯಗಳ ಒಕ್ಕಣೆ, ಶುದ್ದೀಕರಣ ಇತ್ಯಾದಿ ಎಲ್ಲ ಹಂತಗಳಲ್ಲೂ ಮಹಿಳೆಯರು ಶ್ರಮಿಸುತ್ತಾರೆ.ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಲ್ಲಿ ಒಟ್ಟು ಕಾರ್ಮಿಕ ಶಕ್ತಿಯಲ್ಲಿ 60-70% ಭಾಗ ಮಹಿಳೆಯರದ್ದೇ ಎಂಬ ಅಂಕಿ–ಅಂಶಗಳು ಇವೆ. ಕೃಷಿಯ ಜೊತೆಗೆ ಹೈನುಗಾರಿಕೆ, ಕುರಿ–ಮೇಕೆ ಸಾಕಣೆ, ಕೋಳಿ ಸಾಕಣೆ, ತರಕಾರಿ ತೋಟ, ಹೂ ಬೆಳೆ, ಕೃಷಿಯಿಂದ ಬಂದ ಉತ್ಪನ್ನಗಳ ಸಂಸ್ಕರಣೆ ಇತ್ಯಾದಿ ಕೆಲಸಗಳನ್ನೂ ಮಹಿಳೆಯರೇ ಹೆಚ್ಚಾಗಿ ಮಾಡುತ್ತಾರೆ.

ಆಹಾರ ಭದ್ರತೆ ಮತ್ತು ಆರ್ಥಿಕತೆಯಲ್ಲಿ ರೈತ ಮಹಿಳೆಯರ ಪಾತ್ರ ಹೆಚ್ಚಾಗಿದೆ ಬೀಜ ಸಂರಕ್ಷಣೆ, ಭತ್ತ–ರಾಗಿ–ಸಜ್ಜೆ ಮುಂತಾದ ಸ್ಥಳೀಯ ದಾನ್ಯಗಳ ಬೆಳೆಸುವಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಅನೇಕ ಊರುಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ತರಕಾರಿ, ಹಾಲು, ಮೊಸರು, ಗೊಬ್ಬರ, ಹಣ್ಣಿನ ಸಂಸ್ಕರಿತ ಉತ್ಪನ್ನಗಳನ್ನು ಮಾರಾಟ ಮಾಡಿ ಮನೆಗೆಹೆಚ್ಚುವರಿ ಆದಾಯ ತರಲಾಗುತ್ತಿದೆ. ಈ ಆದಾಯದಿಂ ದ ಮಕ್ಕಳ ಶಿಕ್ಷಣ, ಆರೋಗ್ಯ, ಕುಟುಂಬದ ಹೂಡಿಕೆ ಮತ್ತು ತುರ್ತು ಅವಶ್ಯಕತೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ.

ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಹಿಳೆಯರು ಆರ್ಗಾನಿಕ್ ಕೃಷಿ. ಮಿಲೆಟ್ಗಳ ಬೆಳೆ, ಪಾರಂಪರಿಕ ಬೀಜ ಸಂರಕ್ಷಣೆ ಮುಂತಾದಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ.ಸಮೂಹ ಬೀಜ ಬ್ಯಾಂಕ್ಗಳನ್ನು ನಡೆಸುವ ಮಹಿಳಾ ರೈತರು, ಬೀಜ ಉಳಿಸುವ ಕೆಲಸ ಗ್ರಾಮೀಣಮಟ್ಟದಲ್ಲಿ ಆಹಾರ ಹಾಗೂ ಪೋಷಕಾಂಶ ಭದ್ರತೆಯನ್ನು ಹೆಚ್ಚಿಸುತ್ತಿದೆ.ಸ್ವಸಹಾಯ ಸಂಘಗಳು, ಮಹಿಳಾ ರೈತರ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳ (FPO) ಮೂಲಕ ಮಹಿಳೆಯರು ತೀರ್ಮಾನ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಆರಂಭಿಸಿದ್ದಾರೆ.
ಸವಾಲುಗಳು ಮತ್ತು ಸಮಸ್ಯೆಗಳು
ಮಹಿಳೆಯರು ದಿನವಿಡೀ ಕೃಷಿ ಕೆಲಸ ಮಾಡಿದರೂ. ಭೂಸ್ವಾಮ್ಯ ಹಕ್ಕು ತುಂಬಾ ಕಡಿಮೆ; ಕೃಷಿ ಭೂಮಿ ಸಾಮಾನ್ಯವಾಗಿ ಗಂಡಸರ ಹೆಸರಿನಲ್ಲಿ ಇರುವುದರಿಂದ ಸಾಲ, ಧನಸಹಾಯ, ಸರ್ಕಾರಿ ಯೋಜನೆಗಳ ನೇರ ಲಾಭಅವಳಿಗೆ ತಲುಪುವುದಿಲ್ಲ.ಅಧಿಕ ಕೆಲಸ, ಕಡಿಮೆ ಕೂಲಿ, ಯಾಂತ್ರೀಕರಣದಲ್ಲಿ ತರಬೇತಿ ಕೊರತೆ, ಆರೋಗ್ಯ ಸಮಸ್ಯೆಗಳು, ಸಾಮಾಜಿಕ ಲಿಂಗ ಅಸಮಾನತೆ ಇವು ಮಹಿಳಾ ರೈತರ ಬದುಕನ್ನು ಕಠಿಣಗೊಳಿಸುತ್ತವೆ.”ರೈತ” ಎಂಬ ಕಾನೂನು ಪರ ವ್ಯಾಖ್ಯಾನದಲ್ಲಿಯೇ ಮಹಿಳೆಯ ಹೆಸರು ಕಾಣಿಸದಿರುವುದು ಅವಳ ಗುರುತಿನ ಸಮಸ್ಯೆಯನ್ನುಹೆಚ್ಚಿಸುತ್ತಿದೆ.ಸಬಲೀಕರಣದ ದಿಕ್ಕಿನಲ್ಲಿ ನಡೆಯುತ್ತಿರುವ ಹೆಜ್ಜೆಗಳು ಸ್ವಸಹಾಯ ಸಂಘಗಳ ಮೂಲಕ ಮೈಕ್ರೋ ಕ್ರೆಡಿಟ್. ಉಳಿತಾಯ ಮತ್ತು ಚಿಕ್ಕ ಉದ್ಯಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುತ್ತಿವೆ.ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಮಹಿಳಾ ರೈತರಿಗೆ ಯಾಂತ್ರೀಕರಣ, ಸಾಂಪ್ರದಾಯಿಕ ಜ್ಞಾನ, ಆರ್ಗಾನಿಕ್ ಕೃಷಿ, ಹವಾಮಾನ ಸ್ನೇಹಿ ಕೃಷಿ ತಂತ್ರಗಳ ಬಗ್ಗೆ ತರಬೇತಿ ನೀಡುತ್ತಿವೆ. ಅವಳಿಗೆ ಬ್ಯಾಂಕ್ ಸಾಲ, ತಾಂತ್ರಿಕ ಸಹಾಯ, ವಿಮೆ, ಬೆಂಬಲ ಬೆಲೆ ನೀತಿ ಇತ್ಯಾದಿಗಳ ಸರಿಯಾದ ಲಾಭ ಸಿಗಬಹುದು ಕೃಷಿ ನೀತಿಗಳು, ರೈತ ಉತ್ಪಾದಕರ ಸಂಘಗಳು, ಸಹಕಾರ ಸಂಘಗಳಲ್ಲಿ ಮಹಿಳೆಯ ನಿರ್ಣಾಯಕ ಸ್ಥಾನವನ್ನು ಖಚಿತಪಡಿಸಿದರೆ, ಸಮಾನತೆ ಮತ್ತು ಸಮೃದ್ಧಿ ಎರಡೂ ಸಾಧ್ಯವಾಗುತ್ತವೆ. ಮಹಿಳೆಯರನ್ನು ಕೇವಲ “ಕಾರ್ಮಿಕಿಗಳೆಂದು ಅಲ್ಲ, ಜ್ಞಾನಸಂಪನ್ನ ರೈತ” ಮತ್ತು ನಾಯಕಿಗಳೆಂದು ಸ್ವೀಕರಿಸುವುದು ಗ್ರಾಮೀಣ ಸಮಾಜದ ಸಮಗ್ರ ಅಭಿವೃದ್ಧಿಗೆ ಅವಶ್ಯಕ.

ಈ ರೀತಿಯಾಗಿ, ಕೃಷಿ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ ಅಷ್ಟೇ ಅಪಾರವಾದದು. ಅದು ಭಾರತೀಯ ಮತ್ತು ಕರ್ನಾಟಕದ ಗ್ರಾಮೀಣ ಜೀವನದ ಅಸ್ತಿತ್ವಕ್ಕೆ ಅವಿಭಾಜ್ಯ ಅಂಗವಾಗಿದ್ದು, ಅವಳಿಗೆ ಯೋಗ್ಯ ಮಾನ್ಯತೆ, ಹಕ್ಕು ಮತ್ತು ಸಬಲೀಕರಣ ದೊರಕಿದಾಗ ಮಾತ್ರ ನಿಜವಾದ ಕೃಷಿ ಅಭಿವೃದ್ಧಿ ಸಾಧ್ಯವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
